ಆಹಾರದಲ್ಲಿ ವಿಷ‌ ಪ್ರಕರಣ: ತೆಲಂಗಾಣದಲ್ಲಿ ಮಯೋನೈಸ್ ಒಂದು ವರ್ಷ ನಿಷೇಧ - Mahanayaka
4:06 AM Wednesday 20 - August 2025

ಆಹಾರದಲ್ಲಿ ವಿಷ‌ ಪ್ರಕರಣ: ತೆಲಂಗಾಣದಲ್ಲಿ ಮಯೋನೈಸ್ ಒಂದು ವರ್ಷ ನಿಷೇಧ

30/10/2024


Provided by

ರಾಜ್ಯದಲ್ಲಿ ಮಯೋನೈಸ್ ನಲ್ಲಿ ವಿಷ ಇತ್ತೆಂಬ ಪ್ರಕರಣಗಳು ಬೆಳಕಿಗೆ ಬಂದ ನಂತರ ಆಹಾರ ಸುರಕ್ಷತೆಯ ಕಾಳಜಿಯಿಂದಾಗಿ ತೆಲಂಗಾಣ ಸರ್ಕಾರವು ಕಚ್ಚಾ ಮೊಟ್ಟೆ ಆಧಾರಿತ ಮಯೋನೈಸ್ ಅನ್ನು ಬುಧವಾರ ನಿಷೇಧಿಸಿದೆ. ಹೈದರಾಬಾದ್ ನಲ್ಲಿ ಮೊಮೊಗಳನ್ನು ಸೇವಿಸಿ ಓರ್ವ ವ್ಯಕ್ತಿ ಸಾವನ್ನಪ್ಪಿದ ಘಟನೆಯ ಹಾಗೂ 15 ಮಂದಿ ಅನಾರೋಗ್ಯಕ್ಕೆ ಒಳಗಾದ ಒಂದು ದಿನದ ನಂತರ ಈ ಆದೇಶವನ್ನು ಹೊರಡಿಸಲಾಗಿದೆ.

ಈ ನಿಷೇಧವು ಬುಧವಾರದಿಂದ ಜಾರಿಗೆ ಬಂದಿದ್ದು, ಆಹಾರ ನೈರ್ಮಲ್ಯವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಆರೋಗ್ಯವನ್ನು ಕಾಪಾಡಲು ಪರ್ಯಾಯ ಮಯೋನೈಸ್ ಸಿದ್ಧತೆಗಳನ್ನು ಅಧಿಕಾರಿಗಳು ಪ್ರೋತ್ಸಾಹಿಸುವುದರೊಂದಿಗೆ ಒಂದು ವರ್ಷದವರೆಗೆ ಮುಂದುವರಿಯುತ್ತದೆ.

ಆಹಾರ ಸುರಕ್ಷತಾ ಅಧಿಕಾರಿಗಳ ಪ್ರಕಾರ, ಸ್ಯಾಂಡ್ ವಿಚ್ ಗಳು, ಮೊಮೊಗಳು, ಶವರ್ಮಾ ಮತ್ತು ಅಲ್ ಫಾಹಮ್ ಚಿಕನ್ ಮುಂತಾದ ಭಕ್ಷ್ಯಗಳಲ್ಲಿ ವ್ಯಾಪಕವಾಗಿ ಬಳಸಲಾಗುವ ಮೊಟ್ಟೆ ಆಧಾರಿತ ಮಯೋನೈಸ್ ಬಳಕೆಯಿಂದ ರಾಜ್ಯದಲ್ಲಿ ಇತ್ತೀಚಿನ ಹಲವಾರು ಮಾಲಿನ್ಯ ಪ್ರಕರಣಗಳು ಪತ್ತೆಯಾಗಿವೆ. ಇದನ್ನು ಮೊಟ್ಟೆಯ ಹಳದಿ ಲೋಳೆಯನ್ನು ಎಣ್ಣೆಯೊಂದಿಗೆ ಮಿಶ್ರಣ ಮಾಡುವ ಮೂಲಕ ಬಳಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ವಿನೆಗರ್ ಅಥವಾ ನಿಂಬೆ ರಸದೊಂದಿಗೆ ಸುವಾಸನೆ ಮಾಡಲಾಗುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ