ಅಮೆರಿಕ ಅಧ್ಯಕ್ಷೀಯ ಚುನಾವಣಾ ಕುತೂಹಲ: ಫಲಿತಾಂಶದಲ್ಲಿ ಯಾರಿಗೆ ಮೇಲುಗೈ? - Mahanayaka
12:43 PM Tuesday 14 - October 2025

ಅಮೆರಿಕ ಅಧ್ಯಕ್ಷೀಯ ಚುನಾವಣಾ ಕುತೂಹಲ: ಫಲಿತಾಂಶದಲ್ಲಿ ಯಾರಿಗೆ ಮೇಲುಗೈ?

05/11/2024

2024ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬುಧವಾರ ಬೆಳಗ್ಗೆ ಹೊರಬೀಳುವ ಸಾಧ್ಯತೆ ಇದೆ. ಹಿಂದೆ ಒಂದು ಬಾರಿ ಫಲಿತಾಂಶ ಬರಲು ಒಂದು ತಿಂಗಳಷ್ಟು ಸಮಯ ಹಿಡಿದಿತ್ತು. ಮತ್ತೊಮ್ಮೆ ಹೀಗಾಗುವ ಸಾಧ್ಯತೆಯ ಚರ್ಚೆಗಳು ಕೂಡ ನಡೆಯುತ್ತಿವೆ.


Provided by

ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪ್ರಚಾರವನ್ನು ಕೊನೆಗೊಳಿಸುತ್ತಿದ್ದಂತೆ 78 ದಶಲಕ್ಷಕ್ಕೂ ಹೆಚ್ಚು ಅಮೆರಿಕನ್ ಮತದಾರರು ಅದಾಗಲೇ ತಮ್ಮ ಮತ ಚಲಾಯಿಸಿದ್ದಾರೆ.

2016ರಲ್ಲಿ, ಮತದಾನವು ನವೆಂಬರ್ 8ರಂದು ಸಂಜೆ ಕೊನೆಗೊಂಡಿತ್ತು ಮತ್ತು ನವೆಂಬರ್ 9ರಂದು ಮುಂಜಾನೆ 2:30ರ ವೇಳೆಗೆ ಫಲಿತಾಂಶ ಸಂಪೂರ್ಣವಾಗಿ ಹೊರಬಂದಿತ್ತು. ಆವಾಗ ಟ್ರಂಪ್ ತಮ್ಮ ಪ್ರಮುಖ ರಾಜ್ಯ ವಿಸ್ಕಾನ್ಸಿನ್ ಮತ್ತು ಅದರ 10 ಎಲೆಕ್ಟೋರಲ್ ಕಾಲೇಜ್ ಮತಗಳನ್ನು ಗೆದ್ದು 270 ಎಲೆಕ್ಟೋರಲ್ ಕಾಲೇಜ್ ಮತಗಳ ಮ್ಯಾಜಿಕ್ ಸಂಖ್ಯೆಯನ್ನು ದಾಟಿದ್ದರು. ಈ ಮೂಲಕ ಅವರು ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅದಾಗಿ ಐದು ನಿಮಿಷಗಳ ನಂತರ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದರು.

ಯುಎಸ್ ಅಧ್ಯಕ್ಷೀಯ ಚುನಾವಣೆಯನ್ನು ರಾಷ್ಟ್ರೀಯ ಮತಗಳ ಒಟ್ಟು ಮೊತ್ತದಿಂದ ನಿರ್ಧರಿಸಲಾಗುವುದಿಲ್ಲ. ಬದಲಾಗಿ ಗೆದ್ದ ಎಲೆಕ್ಟೋರಲ್ ಕಾಲೇಜ್ ಮತಗಳಿಂದ ನಿರ್ಧರಿಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಹ್ಯಾರಿಸ್ ಮತ್ತು ಟ್ರಂಪ್ ಗೆಲ್ಲಲು 538 ಎಲೆಕ್ಟೋರಲ್ ಕಾಲೇಜ್ ಮತಗಳಲ್ಲಿ ಕನಿಷ್ಠ 270 ಮತಗಳನ್ನು ಗೆಲ್ಲಬೇಕು.

ಪ್ರತಿ ರಾಜ್ಯಕ್ಕೆ ಹಲವಾರು ಎಲೆಕ್ಟೋರಲ್ ಕಾಲೇಜ್ ಮತಗಳನ್ನು ನಿಗದಿಪಡಿಸಲಾಗುತ್ತದೆ. ಇದು ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಸೆನೆಟ್​ಗೆ ಕಳುಹಿಸುವ ಸದಸ್ಯರ ಸಂಖ್ಯೆಯ ಒಟ್ಟು ಮೊತ್ತವಾಗಿದೆ; ಸೆನೆಟ್ ಎಣಿಕೆಯು ಪ್ರತಿ ರಾಜ್ಯಕ್ಕೆ ಒಂದೇ ಆಗಿರುತ್ತದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ