ದುರಂತ: ಅತ್ತ ಅವಕಾಶವೂ ಇಲ್ಲ, ಇತ್ತ ಹಣವೂ ಇಲ್ಲ; ಖಿನ್ನತೆಯಿಂದ ಬಳಲಿ ಕಿರುತೆರೆ ನಟ ಆತ್ಮಹತ್ಯೆ - Mahanayaka
10:25 PM Tuesday 14 - October 2025

ದುರಂತ: ಅತ್ತ ಅವಕಾಶವೂ ಇಲ್ಲ, ಇತ್ತ ಹಣವೂ ಇಲ್ಲ; ಖಿನ್ನತೆಯಿಂದ ಬಳಲಿ ಕಿರುತೆರೆ ನಟ ಆತ್ಮಹತ್ಯೆ

09/11/2024

35 ವರ್ಷದ ಕಿರುತೆರೆ ನಟರೊಬ್ಬರು ಮುಂಬೈ ಪಶ್ಚಿಮ ಉಪನಗರ ಗೋರೆಗಾಂವ್ ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ‌ನಡೆದಿದೆ.
ನಟ ನಿತಿನ್ ಕುಮಾರ್ ಸತ್ಯಪಾಲ್ ಸಿಂಗ್ ಅವರು ಬುಧವಾರ ಯಶೋಧಮ್ ಪ್ರದೇಶದ ತಮ್ಮ ಅಪಾರ್ಟ್ ಮೆಂಟ್ ‌ನಲ್ಲಿ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.


Provided by

ಸಿಂಗ್ ಕಳೆದ ಎರಡು ವರ್ಷಗಳಿಂದ ಖಿನ್ನತೆಯಿಂದ ಬಳಲುತ್ತಿದ್ದರು. ಯಾಕೆಂದರೆ ಅವರಿಗೆ ದೂರದರ್ಶನ ಮತ್ತು ಚಲನಚಿತ್ರಗಳಲ್ಲಿ ಕೆಲಸ ಸಿಗುತ್ತಾ ಇರಲಿಲ್ಲ. ಹೀಗಾಗಿ ಅವರು ಚಿಕಿತ್ಸೆ ಪಡೆಯುತ್ತಿದ್ದರು.

ಸಿಂಗ್ ಅವರ ಪತ್ನಿ ತಮ್ಮ ಮಗಳನ್ನು ಉದ್ಯಾನವನಕ್ಕೆ ಕರೆದೊಯ್ದಿದ್ದರು. ಬರುವಾಗ ಫ್ಲ್ಯಾಟ್ ಒಳಗಿನಿಂದ ಲಾಕ್ ಆಗಿರುವುದನ್ನು ಅವಳು ಕಂಡುಕೊಂಡಳು. ಕಾಲ್ ಮಾಡಿದಾಗ ಪತಿಯಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯಲಿಲ್ಲ.
ಅಂತಿಮವಾಗಿ ಫ್ಲ್ಯಾಟ್ ಒಳಗೆ ಹೋದಾಗ ನಟ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಕೂಡಲೇ ನಟನನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದಾರೆ. ಆಕಸ್ಮಿಕ ಸಾವಿನ ಪ್ರಕರಣ ದಾಖಲಿಸಲಾಗಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ