ತಾನು ಬರೆದ ಹಾಡು ಹಿಟ್ ಆಗಬೇಕೆಂದು ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ಯುವಕ: 24 ವರ್ಷದ ಗೀತರಚನೆಕಾರ ಅರೆಸ್ಟ್ - Mahanayaka
10:42 PM Wednesday 20 - August 2025

ತಾನು ಬರೆದ ಹಾಡು ಹಿಟ್ ಆಗಬೇಕೆಂದು ನಟ ಸಲ್ಮಾನ್ ಖಾನ್ ಗೆ ಬೆದರಿಕೆ ಹಾಕಿದ ಯುವಕ: 24 ವರ್ಷದ ಗೀತರಚನೆಕಾರ ಅರೆಸ್ಟ್

13/11/2024


Provided by

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಮತ್ತು ಗ್ಯಾಂಗ್ ಸ್ಟಾರ್ ಲಾರೆನ್ಸ್ ಬಿಷ್ಣೋಯ್ ಹೆಸರಿನಲ್ಲಿ ಅವರಿಂದ 5 ಕೋಟಿ ರೂ.ಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಉದಯೋನ್ಮುಖ ಹಾಡು ಬರಹಗಾರನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದ ರಾಯಚೂರಿನ ಸೊಹೈಲ್ ಪಾಷಾ ತಾನು ಬರೆದ ಹಾಡು ಪ್ರಸಿದ್ಧವಾಗಬೇಕೆಂದು ಬಯಸಿದ್ದ. ಈ ಉದ್ದೇಶಕ್ಕಾಗಿ ಈ ತಂತ್ರವನ್ನು ಬಳಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನವೆಂಬರ್ 7 ರಂದು ಮುಂಬೈ ಸಂಚಾರ ಪೊಲೀಸರ ವಾಟ್ಸಾಪ್ ಸಹಾಯವಾಣಿಗೆ ಮೆಸೇಜ್ ಕಳುಹಿಸಿದವರು ಬಿಷ್ಣೋಯ್ ಗ್ಯಾಂಗ್‌ ನ ಸದಸ್ಯರಾಗಿದ್ದಾರೆ. ಸಲ್ಮಾನ್ ಖಾನ್ 5 ಕೋಟಿ ರೂ.ಗಳನ್ನು ಪಾವತಿಸದಿದ್ದರೆ ಕೊಲ್ಲಲಾಗುವುದು ಎಂದು ಅನೇಕ ಸಂದೇಶಗಳು ಬಂದಿವೆ.

ಅವರು “ಮೈ ಸಿಕಂದರ್ ಹೂ” ಹಾಡಿನ ಬರಹಗಾರನನ್ನು ಸಹ ಕೊಲ್ಲುತ್ತಾರೆ ಎಂದು ಎಚ್ಚರಿಸಲಾಗಿತ್ತು.
ಮುಂಬೈ ಪೊಲೀಸರ ಅಪರಾಧ ವಿಭಾಗವು ಸಂದೇಶಗಳು ರಾಯಚೂರಿಗೆ ಬಂದ ಮೊಬೈಲ್ ಸಂಖ್ಯೆಯನ್ನು ಪತ್ತೆಹಚ್ಚಿದೆ.

ಅದರಂತೆ, ಕರ್ನಾಟಕಕ್ಕೆ ತಂಡವನ್ನು ಕಳುಹಿಸಲಾಗಿದ್ದು, ಸಂಖ್ಯೆಯ ಮಾಲೀಕ ವೆಂಕಟೇಶ್ ನಾರಾಯಣ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆದರೆ ನಾರಾಯಣ್ ಅವರ ಮೊಬೈಲ್ ನಲ್ಲಿ ಇಂಟರ್ ನೆಟ್ ಸೌಲಭ್ಯವಿರಲಿಲ್ಲ ಎಂದು ಅವರು ಹೇಳಿದರು.
ನಂತರ ಅವರ ಫೋನ್ ಗೆ ವಾಟ್ಸಾಪ್ ಅನುಸ್ಥಾಪನಾ ಒಟಿಪಿ ಬಂದಿದೆ ಎಂದು ಪೊಲೀಸರು ಕಂಡುಕೊಂಡರು. ನವೆಂಬರ್ 3 ರಂದು ಅಪರಿಚಿತರೊಬ್ಬರು ಮಾರುಕಟ್ಟೆಯಲ್ಲಿ ತನ್ನನ್ನು ಸಂಪರ್ಕಿಸಿ ಕರೆ ಮಾಡಲು ನಾರಾಯಣ್ ಅವರತ್ರ ಫೋನ್ ಕೊಡಬಹುದೇ ಎಂದು ಕೇಳಿದರು ಎಂದು ನಾರಾಯಣ್ ಪೊಲೀಸರಿಗೆ ತಿಳಿಸಿದ್ದಾರೆ.

ಒಟಿಪಿ ಪಡೆಯಲು ನಾರಾಯಣ್ ಅವರ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವ್ಯಕ್ತಿ ತನ್ನ ಸ್ವಂತ ಮೊಬೈಲ್ ನಲ್ಲಿ ವಾಟ್ಸಾಪ್ ಅನ್ನು ಇನ್ ಸ್ಟಾಲ್ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಂತರ ಅಪರಾಧ ವಿಭಾಗದ ತಂಡವು ರಾಯಚೂರು ಬಳಿಯ ಮಾನವಿ ಗ್ರಾಮದಲ್ಲಿ ಪಾಷಾನನ್ನು ಬಂಧಿಸಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ