ಮಾಸ್ಕ್ ಹಾಕದ ಬಡವರ ಮೇಲೆ ಜಿಲ್ಲಾಧಿಕಾರಿ, ಪೊಲೀಸರಿಂದ ಹೀರೋಯಿಸಂ! | ವ್ಯಾಪಕ ಖಂಡನೆ - Mahanayaka

ಮಾಸ್ಕ್ ಹಾಕದ ಬಡವರ ಮೇಲೆ ಜಿಲ್ಲಾಧಿಕಾರಿ, ಪೊಲೀಸರಿಂದ ಹೀರೋಯಿಸಂ! | ವ್ಯಾಪಕ ಖಂಡನೆ

mangalore police
23/03/2021


Provided by

ಮಂಗಳೂರು: ಮಾಸ್ಕ್ ಹಾಕದ ಕಾರಣ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುವವರನ್ನು ಪೊಲೀಸರು ಅಪರಾಧಿಗಳಂತೆ ಎಳೆದುಕೊಂಡು ಹೋದ ಘಟನೆ ನಡೆದಿದ್ದು, ಈ ಘಟನೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪೊಲೀಸರು ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಓಡಾಡುತ್ತಿರುವವರನ್ನು ಅಪರಾಧಿಗಳಂತೆ ನೋಡಿದ್ದು, ಜಿಲ್ಲಾಧಿಕಾರಿಗಳ ಹಾಗೂ ಪೊಲೀಸರ ವರ್ತನೆಯಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ ಎಂದು ಮಂಗಳೂರಿನಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಬಡವರ ಮೇಲೆ ಪೊಲೀಸರು ಹಾಗೂ ಜಿಲ್ಲಾಧಿಕಾರಿಗಳು ಹೀರೋಯಿಸಂ ತೋರಿಸಿದ್ದಾರೆ. ನಿಮಗೆ ಪಬ್ ಬಾರ್ ಗಳು ಕಾಣುತ್ತಿಲ್ಲವೇ ಸ್ವಾಮಿ? ಅಲ್ಲಿ ಯಾರು ಮಾಸ್ಕ್ ಧರಿಸುತ್ತಿದ್ದಾರೆ? ಬಡವರು ದುಡಿದು ಬದುಕುವಾಗ ಮಾಸ್ಕ್ ಧರಿಸಿಕೊಂಡೇ ಇರಲು ಸಾಧ್ಯವೇ? ಶ್ರಮದಾಯಕ ಕೆಲಸ ಮಾಡುವವರು ಮಾಸ್ಕ್ ಧರಿಸಿಕೊಂಡು ಕೆಲಸ ಮಾಡುವುದು ವಾಸ್ತವವಾಗಿ ಬಹಳ ಕಷ್ಟವಿದೆ. ಇವುಗಳನ್ನೆಲ್ಲ ಯಾಕೆ ಇವರು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ಈ ಬಿಸಿಲಿನ ಬೇಗೆಯಲ್ಲಿ ಪೊಲೀಸರೇ ಮಾಸ್ಕ್ ಧರಿಸಲು ಕಷ್ಟ ಪಡುತ್ತಿರುತ್ತಾರೆ. ಅಂತಹದ್ದರಲ್ಲಿ ಜಿಲ್ಲಾಧಿಕಾರಿಗಳು ಪೊಲೀಸರ ತಂಡವನ್ನು ಕಟ್ಟಿಕೊಂಡು ಬಂದು ಹೀರೋಯಿಸಂ ಪ್ರದರ್ಶಿಸುವುದು ಎಷ್ಟು ಸರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಇದನ್ನೂ ಓದಿ:

ಸ್ಟ್ರೋಕ್ ಆಗಿದ್ದ ವಿದ್ಯಾರ್ಥಿಯನ್ನು ರೇಗಿಸಿದ ಸಹಪಾಠಿಗಳು | ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು!

ಇತ್ತೀಚಿನ ಸುದ್ದಿ