ಬಸ್ಸಿನಲ್ಲಿ ಮೂವರು ಮಹಿಳೆಯರ ಮೇಲೆ ದಾಳಿ: ಆಸ್ಪತ್ರೆಗೆ ದಾಖಲು - Mahanayaka
12:33 PM Wednesday 22 - October 2025

ಬಸ್ಸಿನಲ್ಲಿ ಮೂವರು ಮಹಿಳೆಯರ ಮೇಲೆ ದಾಳಿ: ಆಸ್ಪತ್ರೆಗೆ ದಾಖಲು

30/11/2024

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರ ಮೇಲೆ ರಾಸಾಯನಿಕ ಎಸೆದು ಹಲ್ಲೆ ನಡೆಸಲಾಗಿದ್ದು, ಉಸಿರಾಟದ ತೊಂದರೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯರ ಮೇಲೆ ರಾಸಾಯನಿಕ ವಸ್ತುವನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂತ್ರಸ್ತರು ಕಿರುಚಲು ಮತ್ತು ಕೆಮ್ಮಲು ಪ್ರಾರಂಭಿಸಿದರು, ಹೀಗಾಗಿ ಚಾಲಕನನ್ನು ತಕ್ಷಣ ಬಸ್ ನಿಲ್ಲಿಸಿದ್ದಾನೆ.

ಸ್ಥಳೀಯರ ಸಹಾಯದಿಂದ ಮಹಿಳೆಯರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.
ದಾಳಿಯಲ್ಲಿ ಬಳಸಿದ ವಸ್ತು ನಿಜವಾಗಿಯೂ ಆಸಿಡ್ ಅಥವಾ ಬೇರೆ ರಾಸಾಯನಿಕವೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ” ಎಂದು ಪೊಲೀಸ್ ಸರ್ಕಲ್ ಇನ್ಸ್‌ ಪೆಕ್ಟರ್ ಚಂದ್ರಶೇಖರ್ ಹೇಳಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ