ಗೃಹಲಕ್ಷ್ಮೀ ಹಣ ವಿಳಂಬ ಪ್ರಶ್ನೆಗೆ, “ನಿಮಗೆ ಸಂಬಳ ಸರಿಯಾಗಿ ಬರುತ್ತಾ?” ಎಂದು ಕೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಗೃಹ ಲಕ್ಷ್ಮೀ ಯೋಜನೆ ಹಣ ವಿಳಂಬಕ್ಕೆ ಸಂಬಂಧಿಸಿದಂತೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, “ನಿಮಗೆ ನಿಮ್ಮ ಸಂಸ್ಥೆಗಳಲ್ಲಿ ಪ್ರತಿ ತಿಂಗಳು ಸರಿಯಾಗಿ ಸಂಬಳ ಸಿಗುತ್ತಾ?” ಎಂದು ಮರು ಪ್ರಶ್ನೆ ಹಾಕಿದ ಘಟನೆ ನಡೆದಿದೆ.
ಗೃಹ ಲಕ್ಷ್ಮೀ ಹಣ 2 ತಿಂಗಳು ಯಾಕೆ ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸುವ ಬದಲು ಮರು ಪ್ರಶ್ನೆ ಹಾಕಿದ ಲಕ್ಷ್ಮೀ ಹೆಬ್ಬಾಳಕರ್, ನಿಮಗೆ ಪ್ರತಿ ತಿಂಗಳು ನಿಮ್ಮ ಸಂಸ್ಥೆಗಳಲ್ಲಿ ಸರಿಯಾಗಿ ಸಂಬಳ ಸಿಗುತ್ತಾ ಎಂದು ಕೇಳಿದ್ದಾರೆ, ಇದಕ್ಕೆ ಪತ್ರಕರ್ತರು, ಹೌದು… ನಮಗೆ ಸಂಬಳ ಸರಿಯಾಗಿ ಬರುತ್ತಿದೆ ಎಂದು ಉತ್ತರಿಸಿದ್ದಾರೆ. ಈ ವೇಳೆ, ಸರ್ಕಾರಿ ಸಂಸ್ಥೆಗಳಲ್ಲಿ ಹಾಗಿಲ್ಲ, 1 ತಿಂಗಳಿಗೊಮ್ಮೆ 2 ತಿಂಗಳಿಗೊಮ್ಮೆ, 3 ತಿಂಗಳಿಗೊಮ್ಮೆ ಕೊಡುತ್ತಾರೆ, ಹಿಂದಿನಿಂದಲೂ ಹೀಗೆಯೇ ಇದೆ ಎಂದು ಅವರು ವಾದಿಸಿದರು.
1 ತಿಂಗಳು ಗೃಹಲಕ್ಷ್ಮೀ ಹಣ ತಡವಾದರೆ 500 ಕರೆಗಳು ಬರುತ್ತವೆ. ಅವರನ್ನು ಸಮಾಧಾನ ಮಾಡುವುದರಲ್ಲೇ ಸಮಯ ಹಿಡಿಯುತ್ತದೆ ಎಂದ ಅವರು, 1 ತಿಂಗಳು ಹಣ ಬರದಿದ್ದರೆ, ಮುಂದಿನ ತಿಂಗಳು ಹಣ ಬರಲ್ಲ ಎಂದು ವಿಪಕ್ಷಗಳು ಹೇಳುತ್ತಾರೆ, ನಾವು ವಚನ ಭ್ರಷ್ಟರಲ್ಲ ಎಂದು ಇದೇ ವೇಳೆ ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97