ಡಾ.ರಾಜ್ ಕುಮಾರ್ ಅಪಹರಣವಾದಾಗ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ: ಒಂದು ನೆನಪು - Mahanayaka

ಡಾ.ರಾಜ್ ಕುಮಾರ್ ಅಪಹರಣವಾದಾಗ ಸಿಎಂ ಆಗಿದ್ದ ಎಸ್.ಎಂ.ಕೃಷ್ಣ: ಒಂದು ನೆನಪು

s m krishna
10/12/2024


Provided by

ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ನಿಧನರಾಗಿದ್ದಾರೆ. ಅವರ ನಿಧನಕ್ಕೆ ರಾಜಕೀಯ ವಲಯ ಶೋಕ ವ್ಯಕ್ತಪಡಿಸಿದೆ.

ವರನಟ ರಾಜ್ ಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಣ ಮಾಡಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು, ಸುಮಾರು 108 ದಿನಗಳ ಕಾಲ ಒದ್ದಾಡಿದ ದಿನಗಳು ಇದೀಗ ಸ್ಮರಿಸಲಾಗುತ್ತಿದೆ.

ಕಾಡುಗಳ್ಳ ವೀರಪ್ಪನ್,  ರಾಜ್ ಕುಮಾರ್ ಅವರನ್ನು ಅಪಹರಣ ಮಾಡಿರುವುದು, ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಅವರನ್ನು ಸುರಕ್ಷಿತವಾಗಿ ವಾಪಸ್ ಕರೆತರುವುದು ಸವಾಲಿನ ಕೆಲಸವಾಗಿತ್ತು.

ಡಾ.ರಾಜ್ ಕುಮಾರ್ ಅವರಿಗೆ ಏನಾದರೂ ಹೆಚ್ಚು ಕಡಿಮೆಯಾಗಿದ್ದರೆ, ರಾಜ್ ಅಭಿಮಾನಿಗಳನ್ನ ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವ ಅರಿವು ಸರ್ಕಾರಕ್ಕೆ ಇತ್ತು. ಕನ್ನಡಿಗರು ಮತ್ತು ತಮಿಳಿಗರ ನಡುವೆ ದೊಡ್ಡ ಗಲಾಟೆಯೇ ಬೆಂಗಳೂರಿನಲ್ಲಿ ನಡೆಯುವ ಸಾಧ್ಯತೆಗಳೂ ಇದ್ದವು. ಇಂತಹ ಸವಾಲನ್ನು ಎದುರಿಸಲು ಎಸ್.ಎಂ.ಕೃಷ್ಣ 108 ದಿನಗಳ ಕಾಲ ಒದ್ದಾಡಿದ್ದರು.  ನಂತರ ನಿರಂತರ ಪರಿಶ್ರಮದ ಬಳಿಕ ಡಾ.ರಾಜ್ ಅವರನ್ನು ಕರೆತರಲಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ