ಪತ್ನಿಯನ್ನು 4 ವರ್ಷ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ ವೈದ್ಯ ಮಹಾಶಯ - Mahanayaka
12:53 AM Saturday 23 - August 2025

ಪತ್ನಿಯನ್ನು 4 ವರ್ಷ ಗೃಹ ಬಂಧನದಲ್ಲಿಟ್ಟು ಚಿತ್ರಹಿಂಸೆ ನೀಡಿದ ವೈದ್ಯ ಮಹಾಶಯ

vinutha rani
12/12/2024


Provided by

ಚಿಕ್ಕಮಗಳೂರು: 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ–ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸವೇ ಆಕೆಯ ಜೊತೆಗಾರರು. ಅತ್ತೆ–ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ–ಖಾಲಿ. 3–4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ–ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು ಅವಿದ್ಯಾವಂತರ ಕಥೆಯಲ್ಲ. ವೈದ್ಯನೋರ್ವ ತನ್ನ ಪತ್ನಿಗೆ 4 ವರ್ಷದಿಂದ ಮಾಡಿರೋ ಉಪಚಾರ.

ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿಯಾದ 45 ವರ್ಷದ ವಿನುತಾರಾಣಿಯನ್ನ 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಟ್ಟಿದ್ರು. ಎಂ.ಬಿ.ಬಿ.ಎಸ್. ಓದುತ್ತಿರೋ ಮಗನೂ ಇದ್ದಾನೆ. ಆದ್ರೆ, ನಾಲ್ಕು ವರ್ಷದಿಂದ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋ ಪತಿಯಿಂದ ಈಕೆಗೆ ಗೃಹಬಂಧನಲ್ಲಿಟ್ಟಿದ್ದಾರೆ. ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಇರಬೇಕು. ಕೇಳಬರುವಂತಿಲ್ಲ. ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು. ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ ಅಷ್ಟೆ. ಊಟ ಅವರು ಹಾಕಿದಾಗ. ಹಾಕಿದಷ್ಟು ಅಷ್ಟೆ. ಗಂಡ ಹಾಗೂ ಅತ್ತೆ ಊರಿಗೆ ಹೋದರೆ ಈಕೆಗೆ ಅವರು ಬರುವಷ್ಟು ದಿನ ಗೃಹ ದಿಗ್ಭಂದನ. ಮನೆಯಿಂದ ಆಚೆ ಬರುವಂತಿಲ್ಲ. ಅವರು ಹೋಗುವಾಗ 20 ರೂಪಾಯಿ ಕೊಟ್ಟು ಹೋಗ್ತಾರೆ. ಅವರು ಬರುವಷ್ಟು ದಿನ ಮನೆಯಿಂದ ಹೊರಗೋಗದಂತೆ ಅದೇ 20 ರೂಪಾಯಿಯಲ್ಲಿ ಬದುಕಬೇಕು. ಎಕ್ಸ್ ಪಾರ್ಟ್ ಡೈವರ್ಸ್ ಕೊಟ್ಟಿದ್ದೇನೆ ಎಂದು 4 ವರ್ಷದಿಂದ ಅನ್ನ–ಆಹಾರ ನೀಡಿದೆ ಗೃಹಬಂಧನದಲ್ಲಿಟ್ಟಿದ್ದಾನೆ ಎಂದು ವೈದ್ಯನ ವಿರುದ್ಧ ಗೃಹಿಣಿ ಹಾಗೂ ಆಕೆಯ ಸಹೋದರ ಆರೋಪಿಸಿದ್ದಾರೆ.

ಮನೆಯಲ್ಲೇ ದಿಗ್ಭಂದನ ಹಾಕಿರೋ ಡಾಕ್ಟ್ರು ಈಕೆಗೆ ಮೊಬೈಲ್ ಕೊಟ್ಟಿದ್ದಾರೆ. ಯೂಟ್ಯೂಬ್ ನೋಡೋದು ಬಿಟ್ಟು ಬೇರೇನೂ ಮಾಡಲು ಆಗಲ್ಲ. ದಿನಕ್ಕೆ ಒಂದು ಅಥವಾ ಎರಡು ಹೊತ್ತು ಊಟ ಕೊಡ್ತಾರೆ. ಅದು ಅವರು ಕೊಟ್ಟಷ್ಟು ಮಾತ್ರ ತಿನ್ನಬೇಕು. ಜಾಸ್ತಿ ಕೇಳಿದರೆ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಓದೆಯೋದು ಮಾಡ್ತಾರಂತೆ. ಕುತ್ತಿಗೆ ಹಿಸುಕಿ ಸಾಯಿ–ಸಾಯಿ ಎಂದು ಡಾಕ್ಟ್ರು ಹಾಗೂ ಆತನ ಅಮ್ಮ ಹೊಡೆಯುತ್ತಾರಂತೆ. ಊಟದಲ್ಲಿ ಸ್ಲೋ ಪಾಯಿಜನ್ ಹಾಕಿ ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನೂತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ.

ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದು ಆತನಿಗೂ ತಾಯಿಯ ಬಳಿ ಬಿಡೋದಿಲ್ಲ. ಆತ ಕೂಡ ಅಮ್ಮನಿಗೆ ನೀನು ಇನ್ನೂ ಸತ್ತಿಲ್ವಾ, ಯಾವಾಗ ಸಾಯ್ತೀಯಾ. ಅಪ್ಪ ನನಗೆ ಓದಿಸುತ್ತೆ ಅಪ್ಪ ಹೇಳಿದ ಹಾಗೆ ಮಾಡು. ಅಪ್ಪ ಕೊಡೋ ಊಟ ತಿನ್ನು ಅಂತಾನಂತೆ. ನಾಲ್ಕು ವರ್ಷದಿಂದ ಅನ್ನ–ಆಹಾರವಿಲ್ಲದೆ ಗೃಹಬಂಧನದಲ್ಲಿ ನರಳಾಡಿದ ಗೃಹಿಣಿ ಪಕ್ಕದ ಮನೆಯವರಿಂದ ಫೋಟೋ ತೆಗೆಸಿ ತಮ್ಮನಿಗೆ ಕಳಿಸಿ ಇದೀಗ ಆಸ್ಪತ್ರೆ ಸೇರಿದ್ದಾರೆ. ಆಕೆಯ ತಮ್ಮ ವಾಗೀಶ್ ಪೊಲೀಸರನ್ನ ಕರೆದುಕೊಂಡು ಹೋಗಿ ಅಕ್ಕನನ್ನ ಆಸ್ಪತ್ರೆ ಸೇರಿಸಿ ಅಕ್ಕನ ಸ್ಥಿತಿ ನೀಡಿ ಕಣ್ಣೀರಿಡ್ತಿದ್ದಾನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

ಇತ್ತೀಚಿನ ಸುದ್ದಿ