ಪುರುಷರು ಶರ್ಟ್ ತೆಗೆದು ದೇವಸ್ಥಾನಕ್ಕೆ ಪ್ರವೇಶಿಸುವುದು ಅನಿಷ್ಠ ಪದ್ಧತಿ: ಶಿವಗಿರಿ ಶ್ರೀ - Mahanayaka
9:17 AM Thursday 16 - October 2025

ಪುರುಷರು ಶರ್ಟ್ ತೆಗೆದು ದೇವಸ್ಥಾನಕ್ಕೆ ಪ್ರವೇಶಿಸುವುದು ಅನಿಷ್ಠ ಪದ್ಧತಿ: ಶಿವಗಿರಿ ಶ್ರೀ

kerala sivagiri mutt
01/01/2025

ತಿರುವನಂತಪುರಂ:   ದೇಗುಲ ಪ್ರವೇಶದ ವೇಳೆ ಪುರುಷರು ಅಂಗಿ ತೆಗೆದು ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಲ್ಲಿಸಬೇಕು ಇದು ಸಾಮಾಜಿಕ ಅನಿಷ್ಠ ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಹೇಳಿದ್ದಾರೆ.


Provided by

ನಾರಾಯಣಗುರು ಸ್ಥಾಪಿತ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಪುರುಷರು ದೇವಾಲಯಗಳಿಗೆ ಪ್ರವೇಶಿಸುವ ವೇಳೆ ಶರ್ಟ್ ತೆಗೆಯುವ ಆಚರಣೆ ‘ಜನಿವಾರ ಧರಿಸಿದ್ದಾರೆಯೇ’ ಎಂದು ಪರೀಕ್ಷಿಸುವುದಕ್ಕಾಗಿ ಆರಂಭವಾದ ಅಭ್ಯಾಸವಾಗಿದೆ. ನಾರಾಯಣಗುರುಗಳಿಗೆ ಸಂಬಂಧಿಸಿದ ಸಂಸ್ಥೆಗಳ ಅಡಿಯಲ್ಲಿ ಕಾರ್ಯಾಚರಿಸುವ ದೇವಸ್ಥಾನಗಳಲ್ಲಿ ಈ ಸಂಪ್ರದಾಯಗಳನ್ನು ನಿರ್ಬಂಧಿಸಲಾಗಿದೆ. ಬೇರೆ ಸಂಸ್ಥೆಗಳೂ ಈ ಬಗ್ಗೆ ಗಮನ ಹರಿಸಬೇಕಿದೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ