ಕಾಂಕ್ರಿಟ್ ಪಿಲ್ಲರ್ ನಲ್ಲಿ ಸಿಲುಕಿದ ಕಾಡಾನೆ: 3 ಗಂಟೆ ನರಳಾಟ - Mahanayaka
9:43 PM Thursday 11 - December 2025

ಕಾಂಕ್ರಿಟ್ ಪಿಲ್ಲರ್ ನಲ್ಲಿ ಸಿಲುಕಿದ ಕಾಡಾನೆ: 3 ಗಂಟೆ ನರಳಾಟ

elephant mysore
05/01/2025

ಮೈಸೂರು: ನಾಗರಹೊಳೆ ಅಭಯಾರಣ್ಯದಿಂದ ನಾಡಿಗೆ ಬಂದಿದ್ದ ಒಂಟಿ ಸಲಗವೊಂದು, ವಾಪಸ್ ಹೋಗುತ್ತಿದ್ದ ವೇಳೆ ತಡೆಗೋಡೆಯ ಕಾಂಕ್ರಿಟ್ ಪಿಲ್ಲರ್ ನಲ್ಲಿ ಸಿಲುಕಿದ ಘಟನೆ ನಡೆದಿದ್ದು, ಪಿಲ್ಲರ್ ನಿಂದ ಹೊರಬರಲಾಗದೇ ಕಾಡಾನೆ ಸುಮಾರು 3 ಗಂಟೆಗಳ ಕಾಲ ನರಳಾಡಿದೆ.

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಮುದುಗನೂರು ಬಳಿಕ ಕಾಂಕ್ರಿಟ್ ಗೋಡೆಗಳ ನಡುವೆ ಕಾಡಾನೆ ಸಿಲುಕಿತ್ತು.  ಆನೆ ಘೀಳಿಡುತ್ತಿರುವ ಶಬ್ದ ಕೇಳಿ ಬೆಚ್ಚಿಬಿದ್ದಿದ್ದ ಗ್ರಾಮಸ್ಥರು ಸ್ಥಳಕ್ಕೆ ತೆರಳಿ ನೋಡಿದ ವೇಳೆ ಘಟನೆ ಬೆಳಕಿಗೆ ಬಂದಿದೆ. ತಕ್ಷಣವೇ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಪಿಲ್ಲರ್ ನ್ನು ತೆರವುಗೊಳಿಸಿದ್ದು, ಬಂಧಮುಕ್ತವಾದ ಕಾಡಾನೆ ಕಾಡಿನ ಕಡೆಗೆ ಓಡಿ ಹೋಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ