ಮಂಗಳೂರು: ಜನವರಿ 11 -12 ರಂದು ಬೀಚ್ ಉತ್ಸವ - Mahanayaka

ಮಂಗಳೂರು: ಜನವರಿ 11 –12 ರಂದು ಬೀಚ್ ಉತ್ಸವ

tannirbhavi beach
06/01/2025


Provided by

ಮಂಗಳೂರು: ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಬೀಚ್ ಉತ್ಸವ ಜನವರಿ 11–12 ರಂದು ತಣ್ಣೀರು ಬಾವಿ ಬೀಚ್ ನಲ್ಲಿ ನಡೆಯಲಿದೆ .

ರೋಹನ್ ಕಾರ್ಪೋರೇಷನ್ ಸಹಯೋಗದೊಂದಿಗೆ ನಡೆಯುವ ಈ ಬೀಚ್ ಉತ್ಸವದಲ್ಲಿ ಎರಡು ದಿನಗಳ ಕಾಲ ಆಕರ್ಷಕ ಸಂಗೀತ ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳು ನಡೆಯಲಿವೆ. ಜನವರಿ 11ರಂದು ಸಂಜೆ 6 ಗಂಟೆಗೆ ನೃತ್ಯೋತ್ಸವ, 7:30 — ಕದ್ರಿ ಮಣಿಕಾಂತ್ ಲೈವ್ ನಡೆಯಲಿದೆ.

ಜನವರಿ 12ರಂದು ಬೆಳಗ್ಗೆ 5:30 ಯೋಗ, 6:30 ಉದಯ ರಾಗ, 9 — ಜಲ ಕ್ರೀಡೆ, 9:30 – ಮರಳು ಶಿಲ್ಪ ಸ್ಪರ್ಧೆ, 5:30 ನೃತ್ಯೋತ್ಸವ, 6 :30 — ಸಮಾರೋಪ ಸಮಾರಂಭ, 7:30ರಿಂದ ರಘು ದೀಕ್ಷಿತ್ ಪ್ರಾಜೆಕ್ಟ್ ಲೈವ್ ನಡೆಯಲಿದೆ.

ಡಿಸೆಂಬರ್ 28–29 ರಂದು ನಿಗದಿಯಾಗಿದ್ದ ಬೀಚ್ ಉತ್ಸವ ಕಾರ್ಯಕ್ರಮವು ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನದ ಶೋಕಾಚರಣೆ ಪ್ರಯುಕ್ತ ಮುಂದೂಡಲಾಗಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ