ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಗೆ ಪ್ರಾಣ ಭೀತಿ: ಖಾಲಿಸ್ತಾನಿ ಪರ ಗುಂಪು ದಾಳಿ ನಡೆಸುವ ಸಂಚು ಬಯಲು - Mahanayaka
11:30 AM Thursday 11 - December 2025

ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ಗೆ ಪ್ರಾಣ ಭೀತಿ: ಖಾಲಿಸ್ತಾನಿ ಪರ ಗುಂಪು ದಾಳಿ ನಡೆಸುವ ಸಂಚು ಬಯಲು

15/01/2025

ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್‌ ರ ಮೇಲೆ ಖಾಲಿಸ್ತಾನಿ ಪರ ಗುಂಪು ದಾಳಿ ನಡೆಸುವ ಸಂಚು ರೂಪಿಸಿದೆ ಎಂದು ಗುಪ್ತಚರ ಇಲಾಖೆ ನೀಡಿದ ವರದಿಗೆ ಪ್ರತಿಕ್ರಿಯಿಸಿರುವ ಅರವಿಂದ ಕೇಜ್ರಿವಾಲ್‌ ‘ದೇವರು ನನ್ನನ್ನು ಕಾಪಾಡುತ್ತಾನೆ’ ಎಂದಿದ್ದಾರೆ. ಕೇಜ್ರಿವಾಲ್‌ ರ ಜೀವಕ್ಕೆ ಆಪತ್ತಿದೆ ಎಂದು ಗುಪ್ತಚರ ಇಲಾಖೆ ಪ್ರಾಥಮಿಕ ಮಾಹಿತಿ ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅರವಿಂದ ಕೇಜ್ರಿವಾಲ್‌ , ‘ದೇವರು ಕಾಪಾಡುವವರನ್ನು ಯಾರಿಂದಲೂ ಕೊಲ್ಲಲು ಸಾಧ್ಯವಿಲ್ಲ. ದೇವರು ಪ್ರತಿಯೊಬ್ಬರಿಗೂ ನೀಡಿರುವ ಲೈಫ್‌ಲೈನ್‌ ಇರುವಷ್ಟು ದಿನ ಆಯಾ ಜೀವಗಳು ಇರಲಿವೆ. ಕರೆ ಬಂದ ಮೇಲೆ ಲೈಫ್‌ಲೈನ್‌ ಅಂತ್ಯಗೊಳ್ಳುತ್ತದೆ. ದೇವರು ನನ್ನೊಂದಿಗೆ ಇದ್ದಾನೆ’ ಎಂದು ಹೇಳಿದ್ದಾರೆ.

ಕೇಜ್ರಿವಾಲ್‌ ಅವರು ಝಡ್‌ ಫ್ಲಸ್‌ ಭದ್ರತೆಯಲ್ಲಿದ್ದಾರೆ. ಬೆಂಗಾವಲು ಪಡೆ, ಎಸ್ಕಾರ್ಟ್‌ ತಂಡ, ಶೋಧ ತಂಡ ಸೇರಿ 63 ಮಂದಿ ಸಿಬ್ಬಂದಿ ಕೇಜ್ರಿವಾಲ್‌ ರಿಗೆ ಭದ್ರತೆ ನೀಡುತ್ತಿದ್ದಾರೆ. ಇದಲ್ಲದೆ ಸಮವಸ್ತ್ರ ಧರಿಸದ 15 ಸಿಎಪಿಎಫ್‌ ಸಿಬ್ಬಂದಿ ಕೇಜ್ರಿವಾಲ್‌ ಭದ್ರತೆಗೆ ನಿಯೋಜನೆಗೊಂಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ