ಹೃದಯಾಘಾತ: 35 ವರ್ಷದ ಯುವ ಕೃಷಿಕ ಹೃದಯಾಘಾತಕ್ಕೆ  ಬಲಿ - Mahanayaka

ಹೃದಯಾಘಾತ: 35 ವರ್ಷದ ಯುವ ಕೃಷಿಕ ಹೃದಯಾಘಾತಕ್ಕೆ  ಬಲಿ

chethan
17/01/2025


Provided by

ಕೊಟ್ಟಿಗೆಹಾರ :  ಯುವ ಕೃಷಿಕರೊಬ್ಬರು ಹೃದಯಾಘಾತದಿಂದ ನಿಧನ ಹೊಂದಿರುವ ಘಟನೆ ನಡೆದಿದೆ.

ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿ ಹಾದಿಹೋಣಿ ಹೊಸ್ಮನೆಮಕ್ಕಿ ಗ್ರಾಮದ ಕೃಷಿಕ, ಬಿಜೆಪಿ ಯುವ ಮುಖಂಡ ಹೆಚ್.ಆರ್. ಚೇತನ್ (35 ವರ್ಷ) ಗುರುವಾರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಚೇತನ್ ಅವರು ಕೂವೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಗೌಡ ಅವರ ಏಕೈಕ ಪುತ್ರರಾಗಿದ್ದರು.

ಚೇತನ್ ಅವರು ಗುರುವಾರ ಬೆಳಿಗ್ಗೆ ಮನೆಯೆದುರು ಕಾಫಿ ಕಣದಲ್ಲಿದ್ಧಾಗ ಹೃದಯಾಘಾತಕ್ಕೊಳಗಾಗಿ ಇದ್ದಕ್ಕಿದಂತೆ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಅವರು ಆಸ್ಪತ್ರೆಗೆ ಹೋಗುವ ದಾರಿಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

ಚೇತನ್ ಪತ್ನಿ, ಇಬ್ಬರು ಇಬ್ಬರ ಚಿಕ್ಕ ಮಕ್ಕಳು, ತಂದೆ ತಾಯಿ, ಶತಾಯುಷಿಯಾಗಿರುವ ಅಜ್ಜಿ, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ಅಕಾಲಿಕ ನಿಧನದಿಂದ ಕುಟುಂಬದ ಸದಸ್ಯರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಚೇತನ್ ಅವರು ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದರು, ಸಾರ್ವಜನಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ಸ್ನೇಹಜೀವಿಯಾಗಿದ್ದ ಚೇತನ್ ಬಾಳಿಬದುಕಬೇಕಾದ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಅವರ ಸಾವಿನ ಸುದ್ದಿ ಕೇಳಿ ಸ್ನೇಹಿತರು, ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ