ಹಳ್ಳಿ ಹೈದ ಹನುಮಂತನಿಗೆ ಒಲಿದ ಬಿಗ್ ಬಾಸ್ ಟ್ರೋಫಿ! - Mahanayaka
10:57 PM Wednesday 20 - August 2025

ಹಳ್ಳಿ ಹೈದ ಹನುಮಂತನಿಗೆ ಒಲಿದ ಬಿಗ್ ಬಾಸ್ ಟ್ರೋಫಿ!

bigg boss kannada
27/01/2025


Provided by

ಬಿಗ್ ಬಾಸ್ ಕನ್ನಡ ಸೀಸನ್ 11ರ ವಿನ್ನರ್ ಆಗಿ ಹನುಮಂತ ಹೊರಹೊಮ್ಮಿದ್ದಾರೆ.   ಬಿಗ್ ಬಾಸ್ ಫಿನಾಲೆ ಕೊನೆಯ ಹಂತ ಬಹಳ ರೋಚಕತೆಯಿಂದ ಕೂಡಿತ್ತು. ವಿನ್ನರ್ ಯಾರು ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು.

ಕಿಚ್ಚ ಸುದೀಪ್ ಅವರು ಹನುಮಂತ ಹಾಗೂ ತ್ರಿವಿಕ್ರಮ್ ಕೈ ಹಿಡಿದು ನಿಂತಿದ್ದರು. ಅಂತಿಮವಾಗಿ ಹಳ್ಳಿಹೈದ ಹನುಮಂತನ ಕೈ ಎತ್ತಿ ವಿಜೇತ ಎಂದು ಘೋಷಿಸಿದರು.  ಹನುಮಂತ ಗೆದ್ದ ಬೆನ್ನಲ್ಲೇ ಹನುಮಂತನ ಅಭಿಮಾನಿಗಳು ಸಂಭ್ರಮಿಸಿದರು.

ಬಿಗ್ ಬಾಸ್ ಶುರುವಾಗಿ 15 ದಿನಗಳ ನಂತರ ಹನುಮಂತ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ನೀಡಿದ್ದರು.  ಕನ್ನಡ ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಸ್ಪರ್ಧಿ ವಿನ್ನರ್ ಆಗಿದ್ದು ಇದೇ ಮೊದಲ ಬಾರಿಯಾಗಿದೆ. ಹನುಮಂತ 50 ಲಕ್ಷ ರೂಪಾಯಿ ಬಹುಮಾನವನ್ನು ಗೆದ್ದು ದಾಖಲೆ ಬರೆದರು.

ಟ್ರೋಫಿ ಗೆದ್ದ ಬಳಿಕ ಮಾತನಾಡಿದ ಹನುಮಂತ, ದೇವರಾಣೆ ನಾನು ಗೆಲ್ಲುತ್ತೇನೆ ಅಂತ ಬಿಗ್ ಬಾಸ್ ಮನೆಗೆ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ ಎಂದಿದ್ದಾರೆ.

ನಾನು ಗೆಲ್ತೀನಿ ಅಂತ ಗೊತ್ತಿದ್ರೆ, ಬಾಯಿ ಪಾಠ ಮಾಡಿಕೊಂಡು ಬರುತ್ತಿದೆ, ಈಗ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ದೇವರು ಸುದೀಪ್ ಸರ್, ಕನ್ನಡ ನಾಡಿನ ಜನತೆಯ ಆಶೀರ್ವಾದದಿಂದ ನಾನು ಗೆದ್ದಿದ್ದೇನೆ ಎಂದು ಅವರು ತಿಳಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ