ಕಾಫಿ ಪಲ್ಪರ್ ನೀರಿನಿಂದ ಹಳ್ಳದ ನೀರು ಕಲುಶಿತ: ಭದ್ರಾ ನದಿಗೂ ಆತಂಕ

ಚಿಕ್ಕಮಗಳೂರು: ಕಾಫಿ ಪಲ್ಪರ್ ನೀರಿನಿಂದ ಹಳ್ಳದ ನೀರು ಕಲುಶಿತಗೊಂಡಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪವಿರೋ ಆನೆ ಹಳ್ಳದಲ್ಲಿ ನಡೆದಿದೆ.
ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪವಿರೋ ಆನೆ ಹಳ್ಳ ಪಲ್ಪರ್ ನೀರಿನಿಂದ ಕಲುಶಿತಗೊಂಡಿದ್ದು, ಈ ಹಳ್ಳದ ನೀರನ್ನು ಹಲವು ಗ್ರಾಮಸ್ಥರು ಬಳಕೆ ಮಾಡುತ್ತಿದ್ದು, ಇದೀಗ ನೀರು ಕಲುಶಿತಗೊಂಡ ಪರಿಣಾಮ ಆತಂಕದಲ್ಲಿದ್ದಾರೆ.
ಆನೆ ಹಳ್ಳದ ನೀರು ಹರಿದು ಭದ್ರಾ ನದಿಗೆ ಸೇರ್ಪಡೆಯಾಗುತ್ತದೆ. ಹೀಗಾಗಿ ಪಲ್ಪರ್ ನೀರು ಹಳ್ಳಕ್ಕೆ ಬಿಡ್ತಿರೋ ಬೆಳೆಗಾರರ ವಿರುದ್ಧ ಕ್ರಮಕ್ಕೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಹಳ್ಳದ ನೀರು ಹಾಗೂ ಭದ್ರಾ ನದಿಯ ನೀರು ಕಲುಶಿತಗೊಳ್ಳುವ ಆತಂಕ ಎದುರಾಗಿದೆ. ಪಲ್ಪರ್ ನೀರು ಹಳ್ಳಕ್ಕೆ ಬಿಟ್ಟವರ ವಿರುದ್ದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಅರೆನೂರಿನ ಆನೆ ಹಳ್ಳದಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7