ಬಂಧನ ಭೀತಿ: ಯುರೋಪಿಯನ್ ರಾಷ್ಟ್ರಗಳ ಪ್ರಯಾಣವನ್ನು ರದ್ದುಗೊಳಿಸಿದ ಇಸ್ರೇಲ್ ಸಚಿವ - Mahanayaka
3:31 AM Thursday 16 - October 2025

ಬಂಧನ ಭೀತಿ: ಯುರೋಪಿಯನ್ ರಾಷ್ಟ್ರಗಳ ಪ್ರಯಾಣವನ್ನು ರದ್ದುಗೊಳಿಸಿದ ಇಸ್ರೇಲ್ ಸಚಿವ

28/01/2025

ಫೆಲೆಸ್ತೀನಿ ಬೆಂಬಲಿಗರಿಂದಲೂ ಯಹೂದಿ ಧರ್ಮ ವಿಶ್ವಾಸಿಗಳಿಂದಲೂ ಮತ್ತು ಬಂಧಿಗಳ ಕುಟುಂಬಸ್ಥರಿಂದಲೂ ತೀವ್ರ ವಿರೋಧವನ್ನು ಎದುರಿಸ್ತಾ ಇರುವ ಇಸ್ರೇಲಿನ ತೀವ್ರ ಬಲಪಂಥೀಯ ಪಕ್ಷದ ಸಚಿವ ಬಂಧನ ಭೀತಿಯಿಂದ ಯುರೋಪಿಯನ್ ರಾಷ್ಟ್ರಗಳ ಪ್ರಯಾಣವನ್ನು ರದ್ದುಗೊಳಿಸಿರುವುದಾಗಿ ತಿಳಿದು ಬಂದಿದೆ. ಗಾಝಾ ಯುದ್ಧದ ಹಿನ್ನೆಲೆಯಲ್ಲಿ ಯುದ್ಧಾರೋಪವನ್ನು ಹೊರಿಸಿ ಬಂಧಿಸಬಹುದೆಂಬ ಭೀತಿಯಿಂದ ಸಚಿವ ಅಮಿಚಾಯ್ ಚಿಕ್ಲಿ ಕೊನೆಯ ಕ್ಷಣದಲ್ಲಿ ತನ್ನ ಯಾತ್ರೆಯನ್ನು ರದ್ದುಗೊಳಿಸಿದ್ದಾರೆ.


Provided by

ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ಏರ್ಪಡಿಸಿರುವ ಹಾಲೋ ಕಾಸ್ಟ್ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ಬೆಲ್ಜಿಯಂಗೆ ಹೋಗಬೇಕಿತ್ತು. ಆದರೆ ಅವರನ್ನು ಬಂಧಿಸುವಂತೆ ಫೆಲೆಸ್ತೀನಿ ಬೆಂಬಲಿಗರು ಮತ್ತು ಇಸ್ರೇಲ್ ನ ಯುದ್ಧ ವಿರೋಧಿ ಹೋರಾಟಗಾರರು ನ್ಯಾಯಾಲಯಕ್ಕೆ ಅರ್ಜಿ ಹಾಕುವುದರೊಂದಿಗೆ ಅವರು ತನ್ನ ಯಾತ್ರೆಯನ್ನೇ ರದ್ದುಗೊಳಿಸಿದ್ದಾರೆ. ಬೆಲ್ಜಿಯಂನಲ್ಲಿ ಚಿಟ್ಲಿಗೆ ರಾಜತಾಂತ್ರಿಕ ರಕ್ಷಣೆ ಸಿಗಲಾರದು ಎಂದು ಬೆಲ್ಜಿಯಂ ಇಸ್ರೇಲ್ಗೆ ತಿಳಿಸುವುದರೊಂದಿಗೆ ಅವರಿಗೆ ಬಂಧನ ಭೀತಿ ಎದುರಾಗಿತ್ತು.

ಗಾಝಾದ ಮಂದಿಯನ್ನು ಅಲ್ಲಿಂದ ತೆರವುಗೊಳಿಸಬೇಕು ಮತ್ತು ಅವರನ್ನು ನಿರ್ನಾಮ ಮಾಡಬೇಕು ಎಂದು ಈ ಚಿಕ್ಲಿ ಈ ಹಿಂದೆ ಆಗ್ರಹಿಸಿದ್ದರು. ಗಾಝಾ ಯುದ್ಧವನ್ನು ಕೊನೆಗೊಳಿಸಬಾರದು ಎಂದು ಆಗ್ರಹಿಸುವ ಪಕ್ಷದ ಪ್ರತಿನಿಧಿ ಇವರಾಗಿದ್ದಾರೆ. ಗಾಝಾ ಕದನ ವಿರಾಮವನ್ನು ಸಂಪೂರ್ಣವಾಗಿ ಜಾರಿಗೊಳಿಸಿದರೆ ತಾನು ಸಚಿವ ಸಂಪುಟಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಜನಾಂಗ ಹತ್ಯೆಯನ್ನು ಬೆಂಬಲಿಸುವ ಇವರು ಯಹೂದಿ ಸಮುದಾಯವನ್ನು ಪ್ರತಿನಿಧಿಸುವುದಕ್ಕೆ ಅನರ್ಹರಾಗಿದ್ದಾರೆ ಎಂದು ಹೇಳಿ ಇಸ್ರೇಲ್ ಒತ್ತೆಯಾಳುಗಳ 40 ಮಂದಿ ಬಂಧುಗಳು ಮತ್ತು ವಿವಿಧ ರಾಷ್ಟ್ರಗಳ 32 ಮಂದಿ ಯಹೂದಿ ನಾಯಕರು ಹಾಲೋ ಕಾಸ್ಟ್ ಕಾರ್ಯಕ್ರಮವನ್ನು ಏರ್ಪಡಿಸಿದವರಿಗೆ ಪತ್ರ ಬರೆದಿದ್ದರು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ