ಚಾರ್ಮಾಡಿ ಘಾಟ್‌ ನಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ - Mahanayaka
11:24 AM Wednesday 15 - October 2025

ಚಾರ್ಮಾಡಿ ಘಾಟ್‌ ನಲ್ಲಿ ಲಾರಿಯನ್ನು ಅಡ್ಡಗಟ್ಟಿ ದರೋಡೆ

banakkal
06/02/2025

ಕೊಟ್ಟಿಗೆಹಾರ:  ಚಾರ್ಮಾಡಿ ಘಾಟ್ ನಲ್ಲಿ ಬುಧವಾರ ನಡುರಾತ್ರಿ ಚಲಿಸುತ್ತಿದ್ದ ಲಾರಿಯನ್ನು ಮುಸುಕುಧಾರಿಗಳು  ಅಡ್ಡಗಟ್ಟಿ 1.61 ಲಕ್ಷ ರೂ. ದೋಚಿ ಪರಾರಿಯಾಗಿದ್ದಾರೆ.


Provided by

ಬೈಕ್ ನಲ್ಲಿ ಬಂದ ಮುಸುಕುಧಾರಿಗಳು ಕೊಟ್ಟಿಗೆಹಾರ ಕಡೆಯಿಂದ ಮಂಗಳೂರು ಕಡೆ ಸಾಗುತ್ತಿದ್ದ  ಮೀನು ಸಾಗಾಟದ ಲಾರಿಯನ್ನು ಅಣ್ಣಪ್ಪ ದೇವಸ್ಥಾನದಿಂದ ಎರಡು ಕಿ.ಮೀ. ಹಿಂದೆಯೇ ತಡೆದು ಲಾರಿಯ ಚಾಲಕನ ಬದಿಯ ಗಾಜು ಪುಡಿಮಾಡಿ ನಗದು ದೋಚಿ ಪರಾರಿಯಾಗಿದ್ದಾರೆ.

ಘಟನೆ ಸಂಬಂಧ ವಾಹನದ ಚಾಲಕ ಸಲಾಂ ಬಣಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ. ಬಣಕಲ್ ಪೊಲೀಸರು  ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ