ಶ್ರದ್ಧಾ ವಾಕರ್ ತಂದೆ ಹೃದಯಾಘಾತದಿಂದ ಸಾವು - Mahanayaka

ಶ್ರದ್ಧಾ ವಾಕರ್ ತಂದೆ ಹೃದಯಾಘಾತದಿಂದ ಸಾವು

shradha walker father
09/02/2025


Provided by

ನವದೆಹಲಿ: ತನ್ನ ಲೀವ್ ಇನ್ ಸಂಗಾತಿಯಿಂದ ಬರ್ಬರವಾಗಿ ಹತ್ಯೆಗೀಡಾಗಿದ್ದ ಯುವತಿ ಶ್ರದ್ಧಾ ವಾಕರ್ ಅವರ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಶ್ರದ್ಧಾ ವಾಕರ್ ಅವರ ತಂದೆ ವಿಕಾಸ್ ವಾಕರ್ ಮೃತಪಟ್ಟವರಾಗಿದ್ದಾರೆ. ಮಗಳ ಸಾವಿನ ನಂತರ ವಿಕಾಸ್ ವಾಕರ್ ಅವರು ತೀವ್ರವಾಗಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಮಹಾರಾಷ್ಟ್ರದ ಪಾಲ್ಘರ್ ನ ವಸೈನಲ್ಲಿ ಮಗನೊಂದಿಗೆ ವಾಸಿಸುತ್ತಿದ್ದ ವಿಕಾಸ್ ವಾಕರ್ ಅವರು ಭಾನುವಾರ ಮುಂಜಾನೆ ಏಕಾಏಕಿ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದರು.

ವಸಾಯಿ ಪೊಲೀಸರು ಮೃತರ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.  ವೈದ್ಯರು ನೀಡಿದ ವರದಿಯಲ್ಲಿ ಹೃದಯಾಘಾತದಿಂದ ಸಾವು ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಶ್ರದ್ಧಾ ವಾಕರ್ ಗೆ ನ್ಯಾಯ ಕೊಡಿಸಲು ಕಳೆದ 2 ವರ್ಷಗಳಿಂದಲೂ ವಿಕಾಸ್ ವಾಕರ್ ಹೋರಾಟ ನಡೆಸಿದ್ದರು. ಮೆಹ್ರೌಲಿ ಕಾಡಿನಲ್ಲಿ ಮಗಳ ಮೂಳೆಗಳ ಅವಶೇಷಗಳನ್ನು ಪೊಲೀಸರು ಪತ್ತೆ ಹಚ್ಚಿದ್ದರು. ತನಿಖೆ ಸಂಪೂರ್ಣಗೊಳ್ಳದ ಹಿನ್ನೆಲೆ ಇನ್ನೂ ಕೂಡ ಶ್ರದ್ಧಾ ವಾಕರ್ ಗೆ ಅಂತ್ಯಸಂಸ್ಕಾರ ನಡೆಸಲಾಗಿಲ್ಲ. ಮಗಳ ಚಿತಾ ಭಸ್ಮಕ್ಕಾಗಿ ತಂದೆ ಕಾಯುತ್ತಿದ್ದರು. ಇದೀಗ ಹೃದಯಾಘಾತದಿಂದ ನಿಧನರಾಗಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ