ದಿಲ್ಲಿಯಲ್ಲಿನ‌ ಸಿಎಂ ‌ನಿವಾಸದ ನವೀಕರಣಕ್ಕೆ ಕೇಜ್ರಿವಾಲ್ ಮಾಡಿದ ವೆಚ್ಚದ ತನಿಖೆಗೆ ಕೇಂದ್ರ ಜಾಗೃತ ಆಯೋಗ ಆದೇಶ - Mahanayaka

ದಿಲ್ಲಿಯಲ್ಲಿನ‌ ಸಿಎಂ ‌ನಿವಾಸದ ನವೀಕರಣಕ್ಕೆ ಕೇಜ್ರಿವಾಲ್ ಮಾಡಿದ ವೆಚ್ಚದ ತನಿಖೆಗೆ ಕೇಂದ್ರ ಜಾಗೃತ ಆಯೋಗ ಆದೇಶ

15/02/2025

ದಿಲ್ಲಿಯ ಮಖ್ಯಮಂತ್ರಿ ನಿವಾಸವಾದ 6 ಫ್ಲ್ಯಾಗ್‌ಸ್ಟಾಫ್ ಬಂಗಲೆಯ ನವೀಕರಣ ಮತ್ತು ಐಷಾರಾಮಿಯಾಗಿ ಮಾರ್ಪಾಡುಗೊಳಿಸಲು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾಡಿದ ವೆಚ್ಚಗಳ ಕುರಿತು ವಿವರವಾದ ತನಿಖೆಗೆ ಕೇಂದ್ರ ಜಾಗೃತ ಆಯೋಗ ಆದೇಶಿಸಿದೆ.

40,000 ಚದರ ಗಜಗಳಷ್ಟು 8 ಎಕರೆ ವಿಸ್ತಾರವಾದ ಐಷಾರಾಮಿ ಮಹಲು ನಿರ್ಮಿಸಲು ಕಟ್ಟಡ ಮಾನದಂಡಗಳನ್ನು ಬದಿಗಿಟ್ಟು ಯೋಜನೆ ರೂಪಿಸಲಾಗಿದೆ ಎಂಬ ಆರೋಪದ ಮೇಲೆ ವಿವರವಾದ ತನಿಖೆ ನಡೆಸುವಂತೆ ಸಿವಿಸಿ ಕೇಂದ್ರ ಲೋಕೋಪಯೋಗಿ ಇಲಾಖೆಯನ್ನು ಕೇಳಿದೆ.

ಬಿಜೆಪಿ ನಾಯಕ ವಿಜೇಂದರ್ ಗುಪ್ತಾ ಅವರ ದೂರಿನ ಮೇರೆಗೆ, ಸಿಪಿಡಬ್ಲ್ಯೂಡಿ ಅರವಿಂದ್ ಕೇಜ್ರಿವಾಲ್ ಅವರ ಅಧಿಕೃತ ಸಿಎಂ ನಿವಾಸದ ಬಗ್ಗೆ ವಾಸ್ತವಿಕ ವರದಿ ಸಲ್ಲಿಸಿದ ನಂತರ ಫೆಬ್ರವರಿ 13 ರಂದು ಸಿವಿಸಿ ತನಿಖೆಗೆ ಆದೇಶಿಸಿತು.
ಅರವಿಂದ್ ಕೇಜ್ರಿವಾಲ್ ತಮ್ಮ ನಿವಾಸದ ಐಷಾರಾಮಿ ಸೌಕರ್ಯಗಳಿಗಾಗಿ ತೆರಿಗೆದಾರರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದ್ದಾರೆ. ಐಷಾರಾಮಿ ವಸ್ತುಗಳ ಮೇಲಿನ ಖರ್ಚುಗಳು ಮಿತಿ ಮೀರಿದೆ ಮತ್ತು ಭ್ರಷ್ಟಾಚಾರದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ ಎಂದು ಗುಪ್ತಾ ಹೇಳಿದ್ದಾರೆ.

 

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ