ಬೋಟಲ್ಲಿ ತೆರಳುತ್ತಿದ್ದ ಯುವಕನನ್ನು ನುಂಗಿದ ತಿಮಿಂಗಿಲ: ವೀಡಿಯೋ ವೈರಲ್ - Mahanayaka

ಬೋಟಲ್ಲಿ ತೆರಳುತ್ತಿದ್ದ ಯುವಕನನ್ನು ನುಂಗಿದ ತಿಮಿಂಗಿಲ: ವೀಡಿಯೋ ವೈರಲ್

17/02/2025

ಬೋಟಲ್ಲಿ ತೆರಳುತ್ತಿದ್ದ ಯುವಕನನ್ನು ಭಾರೀ ಗಾತ್ರದ ತಿಮಿಂಗಿಲ ಒಂದು ಬೋಟ್ ಸಮೇತ ನುಂಗುವುದು ಮತ್ತು ಆ ಬಳಿಕ ಆತನನ್ನು ಮತ್ತು ಬೋಟನ್ನು ಉಗುಳುವ ವಿಡಿಯೋ ವೈರಲ್ ಆಗಿದೆ. ಚಿಲಿಯ ಪೆಟ್ಟಾಗೋನ್ ಪ್ರದೇಶದಲ್ಲಿ ಕಳೆದ ವಾರ ಈ ಘಟನೆ ನಡೆದಿದೆ. ಇನ್ನೊಂದು ಬೋಟ್ನಲ್ಲಿ ದ್ದ ಯುವಕನ ತಂದೆ ವಿಡಿಯೋ ಚಿತ್ರಿಸುತ್ತಿರುವುದರ ನಡುವೆ ಇವೆಲ್ಲವೂ ದಾಖಲಾಗಿದೆ.

ಅಡ್ರಿಯನ್ ಎಂಬ 24 ವರ್ಷದ ಯುವಕ ಅದ್ಭುತವಾಗಿ ತಿಮಿಂಗಲ ಬಾಯಿಯಿಂದ ಹೊರ ಬಂದ ಯುವಕನಾಗಿದ್ದಾನೆ. ಈತನನ್ನು ಮತ್ತು ಈತನ ಬೋಟನ್ನು ತಕ್ಷಣ ನುಂಗಿದ ತಿಮಿಂಗಿಲ ಅದೇ ವೇಗದಲ್ಲಿ ಈ ಯುವಕನನ್ನು ಮತ್ತು ಬೋಟನ್ನು ಉಗುಳಿದೆ. ತಾನು ಸಾವಿಗೀಡಾದೆ ಎಂದೇ ಭಾವಿಸಿದ್ದೆ ಎಂದು ಆ ಕ್ಷಣವನ್ನು ಈ ಯುವಕ ಹಂಚಿಕೊಂಡಿದ್ದಾನೆ.

ಎಲ್ಲೆಡೆ ನನಗೆ ಕತ್ತಲೆ ಆವರಿಸಿತು. ಏನೊಂದೂ ಕಾಣಲಿಲ್ಲ. ತಿಮಿಂಗಿಲ ತನ್ನನ್ನು ನುಂಗಿದ ಭಾವ ಉಂಟಾಗಿತ್ತು. ಇನ್ನೇನು ಮಾಡಬೇಕು ಎಂದು ಆಲೋಚಿಸುತ್ತಿದ್ದೆ.ಅದೇ ವೇಳೆ ತನ್ನನ್ನು ತಿಮಿಂಗಿಲ್ಲ ಉಗುಳಿತು ಎಂದು ಯುವಕ ಹೇಳಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ