ಕೇರಳದ ಜಿಲ್ಲಾಧಿಕಾರಿ ಕಚೇರಿಯೊಂದರಲ್ಲಿ ಜೇನುನೊಣಗಳ ದಾಳಿ: 70 ಮಂದಿಗೆ ಗಾಯ
 
	
	
	
	
	
ಕೇರಳದ ತಿರುವನಂತಪುರಂ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೇನುನೊಣಗಳ ಹಿಂಡು ದಾಳಿ ನಡೆಸಿ ಸುಮಾರು 70 ಜನರನ್ನು ಗಾಯಗೊಳಿಸಿದ ಘಟನೆ ತಿರುವು ಪಡೆದುಕೊಂಡಿದೆ. ಕಲೆಕ್ಟರೇಟ್ಗೆ ಇಮೇಲ್ ಮಾಡಿದ ಬಾಂಬ್ ಬೆದರಿಕೆಯಿಂದ ತಪಾಸಣೆಯನ್ನು ಮಾಡಲಾಯಿತು. ಪೊಲೀಸರು ಮತ್ತು ಬಾಂಬ್ ಸ್ಕ್ವಾಡ್ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿತು.
ಗಾಯಗೊಂಡವರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು ಮತ್ತು ಸಂದರ್ಶಕರು ಸೇರಿದ್ದಾರೆ. ಕಟ್ಟಡದ ಹಿಂಭಾಗದಲ್ಲಿರುವ ಜೇನುಗೂಡಿನಿಂದ ಜೇನುನೊಣಗಳು ಬಂದಿದೆ ಮತ್ತು ದಾಳಿಗೆ ಒಳಗಾಗಿ ಬಳಲುತ್ತಿರುವವರನ್ನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
“ಕೆಲವು ಜನರಿಗೆ ಐವಿ ಡ್ರಿಪ್ ಗಳ ಅಗತ್ಯವಿತ್ತು” ಎಂದು ತಿರುವನಂತಪುರಂ ಜಿಲ್ಲಾಧಿಕಾರಿ ಅನು ಕುಮಾರಿ ಹೇಳಿದರು. “ಬಾಂಬ್ ಬೆದರಿಕೆ ರೀತಿಯ ವಿಷಯವು ಇದ್ದಕ್ಕಿದ್ದಂತೆ ಸಂಭವಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಇದು ದುರದೃಷ್ಟಕರ” ಎಂದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj





 
 























