ಬಾಲಕನ ಆಸೆ ಪೂರೈಸಲು ವಿಮಾನವನ್ನೇ ತಂದ ರಾಹುಲ್ ಗಾಂಧಿ! - Mahanayaka

ಬಾಲಕನ ಆಸೆ ಪೂರೈಸಲು ವಿಮಾನವನ್ನೇ ತಂದ ರಾಹುಲ್ ಗಾಂಧಿ!

rahul gandhi
06/04/2021

ತಿರುವನಂತಪುರಂ: ಪೈಲೆಟ್ ಆಗಬೇಕು ಎನ್ನುವ 9 ವರ್ಷ ವಯಸ್ಸಿನ ಬಾಲಕನ ಕನಸಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುರುಪು ತುಂಬಿದ್ದು, ತಮ್ಮ ವಿಮಾನಕ್ಕೆ ಕರೆದೊಯ್ದು ವಿಮಾನ ಹಾರಿಸುವುದು ಹೇಗೆ ಎಂದು ವಿವರಿಸಿದ್ದಾರೆ.


Provided by

ಕಣ್ಣೂರು ಜಿಲ್ಲೆಯ ಕೀಝರ್ಕುವಿನ ಸ್ಥಳೀಯ ಚಹಾ ಅಂಗಡಿಯಲ್ಲಿ ಬಾಲಕನೋರ್ವ ರಾಹುಲ್ ಗಾಂಧಿ ಅವರಿಗೆ ಪರಿಚಯವಾಗಿದ್ದಾನೆ. ಆ ಬಾಲಕನ ಹೆಸರು ಅದ್ವೈತ್ ಎಂದು ರಾಹುಲ್ ಗಾಂಧಿ ಅವರೇ ಮಾಹಿತಿ ಹಂಚಿಕೊಂಡಿದ್ದಾರೆ. ಸ್ಪಷ್ಟವಾಗಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯನ್ನಾಡುತ್ತಿರುವ ಬಾಲಕನನ್ನು ಕಂಡು ಅಚ್ಚರಿಗೊಂಡ ರಾಹುಲ್ ಗಾಂಧಿ, ನಿನಗೆ ಏನಾಗಬೇಕು ಎಂದು ಆಸೆ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಬಾಲಕ ತಾನು ಪೈಲೆಟ್ ಆಗಬೇಕು ಎಂದು ಹೇಳಿದ್ದಾನೆ.

ಈ ರೀತಿ ಹೇಳಿದ ಬಾಲಕನಿಗಾಗಿ ರಾಹುಲ್ ಗಾಂಧಿ ಮರುದಿನವೇ ಒಂದು ವಿಮಾನ ವ್ಯವಸ್ಥೆ ಮಾಡಿದ್ದು, ಬಾಲಕ ಹಾಗೂ ಬಾಲಕನ ತಂದೆಯನ್ನು ಬರಮಾಡಿಕೊಂಡಿದ್ದಾರೆ.  ಬಳಿಕ ವಿಮಾನದಲ್ಲಿ ಕುಳಿತು ವಿಮಾನ ಹೇಗೆ ಹಾರಿಸುವುದು ಎಂಬ ಬಗ್ಗೆ ಪೈಲೆಟ್ ಜೊತೆಗೆ ಕುಳಿತು ಬಾಲಕನಿಗೆ ವಿವರಿಸಿದ್ದಾರೆ.

ಈ ವಿಡಿಯೋ ವ್ಯಾಪಕ ವೈರಲ್ ಆಗಿದೆ. ಈ ವಿಡಿಯೋ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ. ರಾಹುಲ್ ಗಾಂಧಿ, ನಿಜವಾದ ಹೀರೋ ಎಂದು ಜನ ಹೇಳಿದ್ದಾರೆ.

 

View this post on Instagram

 

A post shared by Rahul Gandhi (@rahulgandhi)

ಇತ್ತೀಚಿನ ಸುದ್ದಿ