ಅಂತ್ಯ ಸಂಸ್ಕಾರ ಮುಗಿಸಿ ಹಿಂದುರುಗುತ್ತಿದ್ದ ವೇಳೆ ಭೀಕರ ಅಪಘಾತ: ನಜ್ಜುಗುಜ್ಜಾದ ಕಾರು, ಟಿಪ್ಪರ್ - Mahanayaka
10:14 PM Wednesday 22 - October 2025

ಅಂತ್ಯ ಸಂಸ್ಕಾರ ಮುಗಿಸಿ ಹಿಂದುರುಗುತ್ತಿದ್ದ ವೇಳೆ ಭೀಕರ ಅಪಘಾತ: ನಜ್ಜುಗುಜ್ಜಾದ ಕಾರು, ಟಿಪ್ಪರ್

26/03/2025

ಚಿಕ್ಕಮಗಳೂರು:  ಅಂತ್ಯಸಂಸ್ಕಾರ ಮುಗಿಸಿ ಹಿಂದಿರುಗುವಾಗ ಕಾರು–ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿರುವ ಘಟನೆ   ಚಿಕ್ಕಮಗಳೂರು ತಾಲೂಕಿನ ಕೂದುವಳ್ಳಿ ಬಳಿ ನಡೆದಿದೆ.

ಅಪಘಾತದದ ರಭಸಕ್ಕೆ ಕಾರಿನ ಚಕ್ರಗಳು ತುಂಡು-ತುಂಡಾಗಿ ಬಿದ್ದಿವೆ.  ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.   ಡಿಕ್ಕಿಯ ರಭಸಕ್ಕೆ ಟಿಪ್ಪರ್ ಲಾರಿಯ ಆಕ್ಸೆಲ್ ತುಂಡಾಗಿ ಕಂದಕಕ್ಕೆ ಲಾರಿ ಇಳಿದಿದೆ.

ಅಂತ್ಯ ಸಂಸ್ಕಾರ ಮುಗಿಸಿ ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಕಾರು ಹಾಗೂ ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಹೋಗುತ್ತಿದ್ದ ಟಿಪ್ಪರ್ ನಡುವೆ ಈ ಭೀಕರ ಅಪಘಾತ ಸಂಭವಿಸಿದೆ.

ಕಾರಿನಲ್ಲಿದ್ದ ಗಾಯಾಳುಗಳು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಆಲ್ದೂರು ಪೊಲೀಸರು ಭೇಟಿ ಪರಿಶೀಲನೆ  ನಡೆಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ