ಸೈಕಲ್ ನಲ್ಲಿ ತೆರಳಿ ಮತ ಚಲಾಯಿಸಿದ ಬಗ್ಗೆ ನಟ ವಿಜಯ್ ನೀಡಿದ ಸ್ಪಷ್ಟನೆ ಏನು ಗೊತ್ತಾ?
07/04/2021
ಚೆನ್ನೈ: ತಮಿಳುನಟ ಇಳೆಯದಳಪತಿ ವಿಜಯ್ ನಿನ್ನೆ ಸೈಕಲ್ ನಲ್ಲಿ ಮತಗಟ್ಟೆಗೆ ತೆರಳಿ ವೋಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಇದೀಗ ಸ್ವತಃ ನಟ ವಿಜಯ್ ಅವರೇ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ನನ್ನ ಮತಗಟ್ಟೆ ತುಂಬಾ ಇಕ್ಕಟ್ಟಾದ ಸ್ಥಳದಲ್ಲಿದೆ. ಹೀಗಾಗಿ ಅಲ್ಲಿಗೆ ಕಾರಿನಲ್ಲಿ ತೆರಳಲು ಸಾಧ್ಯವಿಲ್ಲವಾಯಿತು. ಅಲ್ಲದೆ ಪಾರ್ಕಿಂಗ್ ಸಮಸ್ಯೆ ಕೂಡ ಉಂಟಾಗಬಹುದು ಎಂದು ಸೈಕಲ್ ನಲ್ಲಿ ತೆರಳಿ ವೋಟ್ ಹಾಕಿ ಬಂದೆ. ಆದರೆ ಇದರ ಹಿಂದೆ ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಟ ವಿಜಯ್ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಜನರಿಗೆ ನೆನಪಿಸಲು ಸೈಕಲ್ ನಲ್ಲಿ ಮತಗಟ್ಟೆಗೆ ಆಗಮಿಸಿದ್ದರು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಟ ವಿಜಯ್ ಈ ಹೇಳಿಕೆ ನೀಡಿದ್ದಾರೆ.




























