ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು: ವಿಡಿಯೋ ಸೆರೆ - Mahanayaka

ವ್ಯಾಯಾಮ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ವ್ಯಕ್ತಿ ಸಾವು: ವಿಡಿಯೋ ಸೆರೆ

uttarkhand
20/04/2025


Provided by

ಉತ್ತರಾಖಂಡ: ದೇಹದ ಆರೋಗ್ಯ ಕಾಪಾಡ ಬೇಕಾದ್ರೆ, ವ್ಯಾಯಾಮ ಮಾಡೋದು ತುಂಬಾ ಅಗತ್ಯ ಅಂತ ಆರೋಗ್ಯ ತಜ್ಙರು ಹೇಳುತ್ತಾರೆ. ಆದ್ರೆ ವ್ಯಕ್ತಿಯೊಬ್ಬರು ವ್ಯಾಯಾಮ ಮಾಡುತ್ತಿದ್ದ ವೇಳೆಯೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಏಪ್ರಿಲ್ 17ರಂದು ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತಪಟ್ಟ ವ್ಯಕ್ತಿಯನ್ನ ಪ್ರಮೋದ್ ಬಿಂಜೋಲಾ ಎಂದು ಗುರುತಿಸಲಾಗಿದೆ.

ತನ್ನ ಮನೆಯ ಸಮೀಪವೇ ಇವರು ವ್ಯಾಯಾಮ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ವ್ಯಾಯಾಮ ನಿಲ್ಲಿಸಿ ರಸ್ತೆ ಬದಿಯ ಸ್ಲ್ಯಾಬ್ ಮೇಲೆ ಕುಳಿತಿದ್ದಾರೆ. ಆದರೆ ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಕುಸಿದು ಬಿದ್ದರು, ಅಲ್ಲಿ ನೋವಿನಿಂದ ಒದ್ದಾಡಿದರು.

ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನಗಳ ನಡೆದವು, ಆದ್ರೆ ಅಷ್ಟರಲ್ಲೇ ಸಾಕಷ್ಟು ಸಮಯ ತಡವಾಗಿತ್ತು. ಅವರು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ವ್ಯಾಯಾಮ ಮಾಡುವ ಹವ್ಯಾಸ ಉಳ್ಳ 30 ವರ್ಷಕ್ಕಿಂತ ಮೇಲಿನವರು ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕು. ECG, ಎಕೋ ಮತ್ತು BP ಟೆಸ್ಟ್‌ ಮಾಡಿಸುವುದು ಅತ್ಯಗತ್ಯ ಎಂದು ತಜ್ಙರು ಹೇಳುತ್ತಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ