ಇವರೇ ಪಹಲ್ಗಾಮ್‌ ನಲ್ಲಿ ಮಾರಣಹೋಮ ನಡೆಸಿದ ಭಯೋತ್ಪಾದಕರು! - Mahanayaka

ಇವರೇ ಪಹಲ್ಗಾಮ್‌ ನಲ್ಲಿ ಮಾರಣಹೋಮ ನಡೆಸಿದ ಭಯೋತ್ಪಾದಕರು!

terrorist sketch
23/04/2025


Provided by

ಪಹಲ್ಗಾಮ್‌ ಅಮಾಯಕ ಪ್ರವಾಸಿಗರ ಪ್ರಾಣ ಬಲಿ ಪಡೆದ ಘಟನೆಗೆ ಸಂಬಂಧಿಸಿದಂತೆ ಘಟನೆಯಲ್ಲಿ ಬದುಕುಳಿದವರ  ಹೇಳಿಕೆಯ ಪ್ರಕಾರ, ಮೂವರು ಭಯೋತ್ಪಾದಕರ ರೇಖಾ ಚಿತ್ರ ಬಿಡುಗಡೆಗೊಳಿಸಲಾಗಿದೆ.

ರೇಖಾ ಚಿತ್ರ ಬಿಡುಗಡೆ ಬೆನ್ನಲ್ಲೇ ಭಯೋತ್ಪಾದಕರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಹೇಳಲಾಗಿದೆ. ದಾಳಿಯ ಹಿಂದೆ ಕೈವಾಡವಿದೆ ಎಂದು ಶಂಕಿಸಲಾಗಿರುವ ಮೂವರು ಭಯೋತ್ಪಾದಕರ ಹೆಸರುಗಳನ್ನು ಭದ್ರತಾ ಸಂಸ್ಥೆಗಳು ಬಿಡುಗಡೆ ಮಾಡಿವೆ. ಅವರನ್ನು ಆಸಿಫ್ ಫೌಜಿ, ಸುಲೇಮಾನ್ ಶಾ ಮತ್ತು ಅಬು ತಲ್ಹಾ ಎಂದು ಗುರುತಿಸಲಾಗಿದೆ.

ದಾಳಿಯಲ್ಲಿ ಬದುಕುಳಿದವರ ವಿವರವಾದ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ ಈ ರೇಖಾಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಮೂಲಗಳ ಪ್ರಕಾರ, ಮೂವರು ಭಯೋತ್ಪಾದಕರು ದಾಳಿಯ ನೇತೃತ್ವ ವಹಿಸಿದ್ದರು, ಹಿಂದೂ ಪುರುಷರನ್ನು ಮಹಿಳೆಯರಿಂದ ಪ್ರತ್ಯೇಕಿಸಿ, ಗುರುತಿಸಿ ಹತ್ಯೆ ಮಾಡಿದ್ದಾರೆ. ಹತ್ತಿರದಲ್ಲಿದ್ದ ಮಹಿಳೆಯರು ದಾಳಿಕೋರರನ್ನು ನೋಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಾದ್ಯಂತ ತೀವ್ರಗೊಂಡ ಕಾರ್ಯಾಚರಣೆ ತೀವ್ರಗೊಂಡಿದೆ.  ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಮತ್ತು ಪ್ರಾಥಮಿಕ ಗುಪ್ತಚರ ಮಾಹಿತಿಯ ಆಧಾರದ ಮೇಲೆ ರಚಿಸಲಾದ ಈ ರೇಖಾಚಿತ್ರಗಳು ಸಾರ್ವಜನಿಕರು ಮತ್ತು ಸ್ಥಳೀಯ ಅಧಿಕಾರಿಗಳಿಗೆ ಅಪರಾಧಿಗಳನ್ನು ಗುರುತಿಸಲು ಸಹಕಾರಿಯಾಗಲಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ