ಎರಡು ಮನೆಗಳ ಮೇಲೆ ಉರುಳಿದ ವಿಮಾನ: ಪೈಲಟ್ ಸಾವು - Mahanayaka
9:15 PM Saturday 18 - October 2025

ಎರಡು ಮನೆಗಳ ಮೇಲೆ ಉರುಳಿದ ವಿಮಾನ: ಪೈಲಟ್ ಸಾವು

aircraft that crashed
04/05/2025

ವಾಷಿಂಗ್ಟನ್: ಎರಡು ಮನೆಗಳ ಮೇಲೆ ವಿಮಾನವೊಂದು ಉರುಳಿರುವ ಘಟನೆ ವಾಷಿಂಗ್ಟನ್ ನ ಸಿಮಿ ಕಣಿವೆಯ ಬಳಿ ನಡೆದಿದೆ.


Provided by

ಈ ಅವಘಡದಲ್ಲಿ ಪೈಲಟ್ ಸಾವನ್ನಪ್ಪಿದ್ದು, 2 ಮನೆಗಳಿಗೆ ಹಾನಿಯಾಗಿದೆ. ಘಟನೆ ನಡೆದ ವೇಳೆ ಎರಡೂ ಮನೆಯೊಳಗೆ ಜನರಿದ್ದರು. ಆದರೆ ಅವರು ಅಪಾಯದಿಂದ ಪಾರಾಗಿದ್ದಾರೆ.

ಲಾಸ್ ಏಂಜಲೀಸ್ನ ವಾಯುವ್ಯಕ್ಕೆ ಸುಮಾರು 80.47 ಕಿಲೋಮೀಟರ್ ದೂರದಲ್ಲಿರುವ ಸಿಮಿ ಕಣಿವೆಯ ವುಡ್ ರಾಂಚ್ ವಿಭಾಗದ ಒಂದು ಮನೆಯ ಛಾವಣಿಯಿಂದ ಹೊಗೆ ಬರುತ್ತಿರುವುದು ಕಂಡುಬಂದಿತ್ತು. ಅಲ್ಲಿ ಪರಿಶೀಲಿಸಿದಾಗ ವಿಮಾನ ಪತನಗೊಂಡಿರುವುದು ಬೆಳಕಿಗೆ ಬಂದಿತ್ತು.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ತೆರಳಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿತ್ತು. ಸುಮಾರು 40 ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ಆರಿಸುವ ಕೆಲಸ ಮಾಡುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ