ಕನ್ನಡ ಅಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಎಫ್ ಐಆರ್ - Mahanayaka

ಕನ್ನಡ ಅಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಕೆ: ಸೋನು ನಿಗಮ್ ವಿರುದ್ಧ ಎಫ್ ಐಆರ್

sonu nigam
04/05/2025


Provided by

ಬೆಂಗಳೂರು: ಕನ್ನಡಿಗರ ಭಾಷಾ ಅಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿ ಉದ್ಧಟತನ ಮೆರೆದ ಹಾಡುಗಾರ ಸೋನು ನಿಗಮ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದ್ದು, ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ನಗರ ಘಟಕದ ಅಧ್ಯಕ್ಷ ಧರ್ಮರಾಜ್ ಎಂಬವರು ನೀಡಿದ ದೂರಿನ ಆಧಾರದ ಮೇಲೆ ಎಫ್ ಐಆರ್ ದಾಖಲಿಸಲಾಗಿದೆ.

ಖಾಸಗಿ ಕಾಲೇಜೊಂದರ ಕಾರ್ಯಕ್ರಮದಲ್ಲಿ ಕನ್ನಡ ಹಾಡು ಹಾಡುವಂತೆ ಮನವಿ ಮಾಡಿದ ವೇಳೆ ಇದಕ್ಕೆ ಪಹಲ್ಗಾಮ್ನಲ್ಲಿ ಅಟ್ಯಾಕ್ ಆಗಿದ್ದು ಅಂತ ಸೋನು ನಿಗಮ್ ಕನ್ನಡ ಅಭಿಮಾನವನ್ನು ನಿಂದಿಸಿದ್ದರು. ಅವರ ಈ ನಡೆ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಸದ್ಯ ದೂರಿನ ಆಧಾರದ ಮೇಲೆ ಬಿಎನ್ ಎಸ್ 351 (1) (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು), 351 (2) (ಕ್ರಿಮಿನಲ್ ಮಾನಹಾನಿ), 353 (ಧಾರ್ಮಿಕ ಮತ್ತು ಭಾಷಿಕ ಭಾವನೆಗಳನ್ನ ಕೆರಳಿಸುವುದು) ಬಿಎನ್ಎಸ್ 352 (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ) ಸೆಕ್ಷನ್ ನಡಿ ಎಫ್ ಐಆರ್ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ