ಮೆಹಂದಿ ಸಂಭ್ರಮದಲ್ಲಿ ವಧು ಚೈತ್ರಾ ಕುಂದಾಪುರ

ಬಿಗ್ ಬಾಸ್ ಕನ್ನಡ ಸ್ಪರ್ಧಿ ಚೈತ್ರಾ ಕುಂದಾಪುರ ಅವರ ವಿವಾಹ ಮೇ 9ರಂದು ನಡೆಯಲಿದೆ. ತಾವು ಕಳೆದ 12 ವರ್ಷಗಳಿಂದ ಪ್ರೀತಿಸಿದ ಯುವಕನೊಂದಿಗೆ ಚೈತ್ರಾ ಕುಂದಾಪುರ ವಿವಾಹವಾಗಲಿದ್ದಾರೆ.
ಈಗಾಗಲೇ ಚೈತ್ರಾ ಕುಂದಾಪುರ ಅವರ ಮೆಹಂದಿ ಶಾಸ್ತ್ರ ನೆರವೇರಿದ್ದು, ಮೆಹಂದಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಲವಲವಿಕೆಯಿಂದ ಭಾಗಿಯಾಗಿದ್ದು, ಬಹಳ ಖುಷಿಯಲ್ಲಿದ್ದಾರೆ.
ಚೈತ್ರಾ ಕುಂದಾಪುರ ಮನೆಯಲ್ಲಿ ಮದುವೆ ಸಂಭ್ರಮ ಶುರುವಾಗಿದೆ. ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಲು ಚೈತ್ರಾ ಕುಂದಾಪುರ ಮುಂದಾಗಿದ್ದಾರೆ.
ಚೈತ್ರಾ ಲವ್ ಕಂ ಅರೇಂಜ್ ಮ್ಯಾರೇಜ್ ಆಗಲಿದ್ದಾರೆ. 12 ವರ್ಷಗಳ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದು, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಚೈತ್ರಾ ಸಿದ್ಧವಾಗಿದ್ದಾರೆ. ಈವರೆಗೆ ಚೈತ್ರಾ ಕುಂದಾಪುರ ಮದುವೆಯಾಗಲಿರುವ ಹುಡುಗ ಯಾರು ಎನ್ನುವುದು ರಿವೀಲ್ ಮಾಡಲಾಗಿಲ್ಲ. ವಿವಾಹದ ನಂತರವೇ ವರ ಯಾರು ಎನ್ನುವುದು ತಿಳಿದು ಬರಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD