ಕದನ ವಿರಾಮದ ನಂತರವೂ ಪಾಕ್ ನಿಂದ ದಾಳಿ: ಶ್ರೀನಗರದಾದ್ಯಂತ ಕೇಳಿದ ಬಂದ ಸ್ಫೋಟದ ಶಬ್ಧ - Mahanayaka
2:36 PM Wednesday 15 - October 2025

ಕದನ ವಿರಾಮದ ನಂತರವೂ ಪಾಕ್ ನಿಂದ ದಾಳಿ: ಶ್ರೀನಗರದಾದ್ಯಂತ ಕೇಳಿದ ಬಂದ ಸ್ಫೋಟದ ಶಬ್ಧ

srinagar
10/05/2025

ನವದೆಹಲಿ/ಶ್ರೀನಗರ:  ಭಾರತ—ಪಾಕ್ ನಡುವೆ ಕದನ ವಿರಾಮ ಘೋಷಣೆಯಾದರೂ ಪಾಕಿಸ್ತಾನ ಮತ್ತೆ ಡ್ರೋನ್ ಹಾಗೂ ಗುಂಡುಗಳನ್ನು ಸಿಡಿಸುತ್ತಿರುವುದು ತಿಳಿದು ಬಂದಿದ್ದು, ಕದನ ವಿರಾಮ ಘೋಷಣೆಯಾದ ಬಳಿಕವೂ ಪಾಕ್  ಮತ್ತೆ ಡ್ರೋನ್ ದಾಳಿಗೆ ಮುಂದಾಗಿದೆ.


Provided by

ಭಾರತ ಮತ್ತು ಪಾಕಿಸ್ತಾನ ಎರಡೂ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ಈ ಘಟನೆ ನಡೆದಿದೆ. ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ X ಪೋಸ್ಟ್‌ ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಕದನ ವಿರಾಮದ ಬಳಿಕವೂ ಶ್ರೀನಗರದಲ್ಲಿ ಕೆಲವು “ಸ್ಫೋಟಗಳು” ಕೇಳಿಬಂದಿವೆ ಎಂದು ಅವರು ತಿಳಿಸಿದ್ದಾರೆ.

ನಗರದ ಅನೇಕ ನಿವಾಸಿಗಳು X ನಲ್ಲಿ ರಾತ್ರಿ ಆಕಾಶದಲ್ಲಿ ಬರುವ ಡ್ರೋನ್‌ ಗಳ ಮೇಲೆ ವಿಮಾನ ವಿರೋಧಿ ಬಂದೂಕುಗಳಿಂದ ಟ್ರೇಸರ್ ಗುಂಡು ಹಾರಿಸುವುದನ್ನು ತೋರಿಸುವ ದೃಶ್ಯಗಳನ್ನು ಪೋಸ್ಟ್ ಮಾಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ