ಯುವಕನ ಮೃತದೇಹ ಕಚ್ಚಿತಿಂದ ನಾಯಿ: ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಘಟನೆ

ನರ್ಮದಾಪುರಂ (ಮಧ್ಯಪ್ರದೇಶ): ಅಪಘಾತಕ್ಕೀಡಾದ ವ್ಯಕ್ತಿಯ ದೇಹವನ್ನು ನಾಯಿ ಕಚ್ಚಿ ತಿಂದಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ನರ್ಮದಾಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದ್ದು, ಘಟನೆಯ ಬೆನ್ನಲ್ಲೇ ಈ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.
ನರ್ಮದಾಪುರಂನ ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಪಾಲನ್ಪುರ ಬಳಿ ಅಪಘಾತದಲ್ಲಿ ಮೃತಪಟ್ಟ ನಿಖಿಲ್ ಚೌರಾಸಿಯಾ (21) ಎಂಬ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಇಡಲಾತ್ತು. ಮೃತ ವ್ಯಕ್ತಿಯ ಸೋದರ ಸಂಬಂಧಿ ಅಂಕಿತ್ ಗೋಹಿಲೆ ಸ್ಥಳದಲ್ಲಿದ್ದ. ನೀರು ಕುಡಿಯಲು ಹೊರಗೆ ಹೋದಾಗ ನಾಯಿಯೊಂದು ಮೃತದೇಹದಿಂದ ಮಾಂಸದ ತುಂಡ ಕಚ್ಚಿಕೊಂಡು ಸ್ಥಳದಿಂದ ಓಡಿ ಹೋಗುವ ದೃಶ್ಯವನ್ನು ಅವರು ನೋಡಿರುವುದಾಗಿ ಹೇಳಿದ್ದಾರೆ.
ಆಸ್ಪತ್ರೆಯ ಸಿವಿಲ್ ಸರ್ಜನ್ ಸುಧೀರ್ ವಿಜಯವರ್ಗಿಯಾ ಈ ಬಗ್ಗೆ ಪ್ರತಿಕ್ರಿಯಿಸಿ ಘಟನೆ ಸಂಬಂಧ ತನಿಖೆ ನಡೆಸಲಾಗುವುದು, ಭದ್ರತಾ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗುವುದು ಮತ್ತು ಸೌಲಭ್ಯದಲ್ಲಿ ಭದ್ರತೆಯನ್ನು ಸುಧಾರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD