ಬೆಣಗಾಲು ಗ್ರಾಮದಲ್ಲಿ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮ

ಪಿರಿಯಾಪಟ್ಟಣ: ತಾಲೂಕಿನ ಬೆಣಗಾಲು ಗ್ರಾಮದಲ್ಲಿ ವೈಶಾಖ ಬುದ್ಧ ಪೂರ್ಣಿಮಾ ಕಾರ್ಯಕ್ರಮ ನಡೆಯಿತು. ವೈಶಾಖ ಬುದ್ಧ ಪೂರ್ಣಿಮೆಯನ್ನು ಬೆಣಗಾಲಿನ ಗ್ರಾಮಸ್ಥರು ಅಚ್ಚುಕಟ್ಟಾಗಿ ಶಿಸ್ತು ಬದ್ಧವಾಗಿ ನೆರವೇರಿಸಿದರು.
ಊರಿನ ಮಧ್ಯಭಾಗದಿಂದ ಮೊಂಬತ್ತಿ ಹಿಡಿದು ಹೊರಟ ಗ್ರಾಮಸ್ಥರು ಹಾಗೂ ಪುಟಾಣಿ ಮಕ್ಕಳು ಅಂಬೇಡ್ಕರ್ ಪ್ರತಿಮೆ ಮುಂದೆ ಇಡಲಾದ ಬುದ್ಧರ ವಿಗ್ರಹದ ಮುಂದೆ ಮೊಂಬತ್ತಿಯನ್ನು ತಂದು ಇಡಲಾಯಿತು. ನಂತರದಲ್ಲಿ ಎಲ್ಲಾ ಗ್ರಾಮಸ್ಥರೊಡನೆ ಬುದ್ಧ ವಿಗ್ರಹಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ನಂತರದಲ್ಲಿ ಉಪನ್ಯಾಸಕರಾದ ಈರಾಜ್ ಸಿದ್ದಾರ್ಥ ಬುದ್ಧನಾದ ಬಗ್ಗೆ ಉಪನ್ಯಾಸವನ್ನು ನೀಡಿದರು. ಇಂಜಿನಿಯರ್ ಶ್ರೀಕಾಂತ್ ಹಾಗೂ ರಾಜೇಶ್ ಉಪನ್ಯಾಸಕರು ಗ್ರಾಮಸ್ಥರಿಗೆ ಪಂಚಶೀಲವನ್ನು ಬೋಧನೆ ಮಾಡಿದರು. ಇದೇ ವೇಳೆ ಭೀಮೋತ್ಸವ 2025ರಲ್ಲಿ ವಿಜೇತ ವಿವಿಧ ಸ್ಪರ್ಧಿಗಳಿಗೆ ಗ್ರಾಮಸ್ಥರಿಂದಲೇ ಬಹುಮಾನವನ್ನು ವಿತರಿಸಲಾಯಿತು.
ಕಾರ್ಯಕ್ರಮದ ಕಡೆಯಲ್ಲಿ ಲಘು ಉಪಹಾರ ಸೇವಿಸುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಆಶಯದಂತೆ ಬೆಣಗಾಲು ಗ್ರಾಮದಲ್ಲಿ ಶಿಸ್ತು ಬದ್ಧವಾಗಿ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಇಂಜಿನಿಯರ್ ವಿಜಯ್ ಕುಮಾರ್, ಮಹಾಚೇತನ ಯುವ ವೇದಿಕೆ ಬೆಣಗಾಲು ತಂಡದ ಹನುಮಂತ್, ಕಿರಣ್, ರೋಹಿತ್,ಪವನ್, ಚಿದ, ಡಿ ರಾಜ್, ಕಿಶೋರ್, ಶಿವಕುಮಾರ್, ಶರತ್, ನಂದೀಪ್, ರಕ್ಷಿತಾ, ಚಿತ್ರ, ಹೇಮ್ ಕುಮಾರ್, ಯಶವಂತ್, ಸಿರಾಜ್, ಕಿರಣ್ ಬಿ ಎಸ್, ರವಿಕುಮಾರ್, ರಮೇಶ್,ಅಂಗಡಿ ಮಾದೇವ್, ಸಣ್ಣಶಿವಣ್ಣ, ಬಸವರಾಜ್, ಸೂರಣ್ಣ, ದಯಾನಂದ, ಶಿವಣ್ಣ, ಶಂಕ್ರಣ್ಣ, ಅವಣಕ್ಕ, ಕಾಳಮ್ಮ, ಗಂಗಮ್ಮ, ಮೀನಾಕ್ಷಿ ಮುಂತಾದ ಊರಿನ ಹಿರಿಯರು ಹಾಜರಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: