ಜೀವ ವಿಮೆಯ ಹಣಕ್ಕಾಗಿ ಸಂಬಂಧಿಕನ ಜೊತೆ ಸೇರಿ ಪತಿಯ ಕಥೆ ಮುಗಿಸಿದಳು! - Mahanayaka
11:49 AM Wednesday 20 - August 2025

ಜೀವ ವಿಮೆಯ ಹಣಕ್ಕಾಗಿ ಸಂಬಂಧಿಕನ ಜೊತೆ ಸೇರಿ ಪತಿಯ ಕಥೆ ಮುಗಿಸಿದಳು!

tamilnadu
10/04/2021


Provided by

ಚೆನ್ನೈ: ಮಹಿಳೆಯೊಬ್ಬರು 3.5 ಕೋ.ರೂ. ಹಣಕ್ಕಾಗಿ ತನ್ನ ಸಂಬಂಧಿಕನ ಜೊತೆ ಸೇರಿ ಪತಿಯನ್ನೇ ಕೊಂದಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದ್ದು, ವಿಮೆಯ ಹಣಕ್ಕಾಗಿ ಪತಿಯನ್ನೇ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ತಮಿಳುನಾಡಿನ ಈರೋಡ್ ಜಿಲ್ಲೆಯ ತುಡುಪತಿ ನಿವಾಸಿ ಕೆ.ರಂಗರಾಜು ಎಂಬವರು ಹತ್ಯೆಗೀಡಾದವರಾಗಿದ್ದಾರೆ.  ಪತ್ನಿ ಜ್ಯೋತಿಮಣಿ ಹಾಗೂ ಸಂಬಂಧಿ ರಾಜಾ ಸೇರಿ ರಂಗರಾಜು ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ವಲಸುಪಾಲಯಂನಲ್ಲಿ ರಾತ್ರಿ ಸುಮಾರು 11:30ಕ್ಕೆ ವಾಹನ ನಿಲ್ಲಿಸಿ, ರಂಗರಾಜುವನ್ನು ವಾಹನದಿಂದ ಕೆಳಗೆ ಇಳಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಜೀವವಾಗಿ ದಹಿಸಿದ್ದಾರೆ.  ಬಳಿಕ ಶುಕ್ರವಾರ ಬೆಳಗ್ಗೆ ತಿರುಪುರ ಗ್ರಾಮೀಣ ಪೊಲೀಸರಿಗೆ ಅಪಘಾತ ನಡೆದಿರುವ ಮಾಹಿತಿ ನೀಡಿದ್ದಾರೆ.

ಮೃತದೇಹವನ್ನು ಕಂಡು ಅನುಮಾನಗೊಂಡ ಪೊಲೀಸರು, ತನಿಖೆ ನಡೆಸಲು ಆರಂಭಿಸಿದ್ದು, ಈ ವೇಳೆ ಆರೋಪಿಗಳು ಸತ್ಯವನ್ನು ಒಪ್ಪಿಕೊಂಡಿದ್ದಾರೆ.  ರಂಗರಾಜು 1.5 ಕೋಟಿ ಸಾಲ ಮಾಡಿದ್ದು, ಜ್ಯೋತಿಮಣಿಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದನು. ರಂಗರಾಜು ಹೆಸರಿನಲ್ಲಿ 3.5 ಕೋಟಿ ವಿಮೆ ಹಣವಿದ್ದರಿಂದ ಜ್ಯೋತಿ ಮಣಿ ಹಾಗೂ ನಾನು ಸಂಚು ರೂಪಿಸಿ ಕೊಲೆ ಮಾಡಲು ನಿರ್ಧರಿಸಿದೆವು. ಅಲ್ಲದೆ ಜ್ಯೋತಿ ಮಣಿ ಕೊಲೆ ಮಾಡಲು ನನಗೆ ಮುಂಗಡವಾಗಿ 50,000 ರೂ ಹಣ ನೀಡಿದ್ದು, ಕೊಲೆ ನಂತರ 1 ಲಕ್ಷ ರೂ. ಹಣ ನೀಡುವುದಾಗಿ ತಿಳಿಸಿದ್ದಳು ಎಂದು ಹೇಳಿದ್ದಾನೆ.

ಇತ್ತೀಚಿನ ಸುದ್ದಿ