ಸ್ನೇಹಿತರ ಜೊತೆಗೆ ಬೇಟೆಗೆ ತೆರಳಿದ್ದ ಯುವಕ ತಾನೇ ಬೇಟೆಯಾದ! - Mahanayaka

ಸ್ನೇಹಿತರ ಜೊತೆಗೆ ಬೇಟೆಗೆ ತೆರಳಿದ್ದ ಯುವಕ ತಾನೇ ಬೇಟೆಯಾದ!

gowtham
22/05/2025


Provided by

ಶಿವಮೊಗ್ಗ: ಸ್ನೇಹಿತರ ಜೊತೆಗೆ ಬೇಟೆಗೆಂದು ಹೋಗಿದ್ದ ಯುವಕನೇ ಬೇಟೆಯಾಗಿರುವ ದಾರುಣ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಕತ್ತೆಹಕ್ಕಲಿ ಎಂಬಲ್ಲಿ ನಡೆದಿದೆ.

ತೀರ್ಥಹಳ್ಳಿ ತಾಲೂಕು ಬಸವಾನಿ ಗ್ರಾಮದ ಬಳಿಯ ಕೊಳಾವರದ ನಿವಾಸಿಯಾದ 22 ವರ್ಷದ ಗೌತಮ್ ಸ್ನೇಹಿತರ ಜೊತೆಗೆ ಬೇಟೆಗೆಂದು ಕತ್ತೆಹಕ್ಕಲಿಗೆ ಹೋಗಿದ್ದ. ಕಾಡು ಪ್ರಾಣಿಗೆ ಗುರಿಯಿಟ್ಟು ಗುಂಡು ಹೊಡೆಯಲು ಸ್ನೇಹಿತರು ಮುಂದಾಗಿದ್ದಾರೆ. ಈ ವೇಳೆ ಮಿಸ್ ಫೈರ್ ಆಗಿದ್ದು, ಗೌತಮ್ ಗೆ ಗುಂಡೇಟು ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಘಟನೆ ನಡೆದ ಬಳಿಕ ಸ್ನೇಹಿತರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.  ಬುಧವಾರ ಬೆಳಗ್ಗೆ ವಿಚಾರ ತಿಳಿದು ಬಂದಿದ್ದು, ತೀರ್ಥಹಳ್ಳಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋದರು.

ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಮೃತ ಗೌತಮ್ ತಂದೆ ವಿಜಯ್ ಅವರು ಘಟನೆ ಬಗ್ಗೆ ದೂರು ನೀಡಿದ್ದು, ಅವರ ದೂರಿನನ್ವಯ ಪ್ರಕರಣ ಕೂಡ ದಾಖಲಿಸಿಕೊಳ್ಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ