ಪಹಲ್ಗಾಮ್ ಉಗ್ರರ ದಾಳಿ ವೇಳೆ ಮಹಿಳೆಯರು ಸಾಹಸ ಪ್ರದರ್ಶಿಸಿದ್ದರೆ 26 ಜನ ಸಾಯುತ್ತಿರಲಿಲ್ಲ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ - Mahanayaka
10:52 PM Friday 12 - December 2025

ಪಹಲ್ಗಾಮ್ ಉಗ್ರರ ದಾಳಿ ವೇಳೆ ಮಹಿಳೆಯರು ಸಾಹಸ ಪ್ರದರ್ಶಿಸಿದ್ದರೆ 26 ಜನ ಸಾಯುತ್ತಿರಲಿಲ್ಲ: ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ram chander jangra
25/05/2025

ಗುರುಗ್ರಾಮ: ಪಹಲ್ಗಾಮ್ ನಲ್ಲಿ ಉಗ್ರರು 26 ಮಂದಿ ಪ್ರವಾಸಿಗರನ್ನು ಹತ್ಯೆ ಮಾಡಿರುವ ವಿಚಾರವಾಗಿ ಬಿಜೆಪಿ ರಾಜ್ಯ ಸಭಾ ಸದಸ್ಯರೊಬ್ಬರು ನಾಲಿಗೆ ಹರಿಯಬಿಟ್ಟಿದ್ದು, ಉಗ್ರರ ದಾಳಿಯನ್ನು ಮಹಿಳೆಯರು ಹಿಮ್ಮೆಟ್ಟಿಸಬೇಕಿತ್ತು ಎನ್ನುವ ಮೂಲಕ, ಉಗ್ರರ ದಾಳಿಯಲ್ಲಿ ತಮ್ಮವರನ್ನು ಕಳೆದುಕೊಂಡು ನೋವಿನಲ್ಲಿರುವ ಮಹಿಳೆಯರಿಗೆ ನೋವುಂಟು ಮಾಡಿದ್ದಾರೆ.

ರಾಜ್ಯ ಸಭಾ ಸದಸ್ಯ ರಾಮಚಂದ್ರ ಜಾಂಗ್ರ ಇಂತಹದ್ದೊಂದು ಹೇಳಿಕೆ ನೀಡಿದ್ದಾರೆ. ದಾಳಿಯಲ್ಲಿ  ಗಂಡಂದಿರನ್ನು ಕಳೆದುಕೊಂಡ ಮಹಿಳೆಯರು ಸಾಹಸ ಮನೋಭಾವ ಪ್ರದರ್ಶನ ಮಾಡಿಲ್ಲ. ಹೀಗಾಗಿ ಗುಂಡಿನ ದಾಳಿಗೆ 26 ಮಂದಿ ಬಲಿಯಾಗಿದ್ದಾರೆ ಎಂದು ಅವರು ನಾಲಿಗೆ ಹರಿಯಬಿಟ್ಟಿದ್ದಾರೆ.

ಬಿಜೆಪಿ ಸರ್ಕಾರದ ಅಹಲ್ಯಾಬಾಯಿ ಹೊಳ್ಕರ್ ತ್ರಿಶತಮಾನ ಸ್ಮಾರಕ ಅಭಿಯಾನ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರವಾಸಿಗರು ದೈನ್ಯತೆಯಿಂದಿದ್ದದ್ದಕ್ಕೆ ಹತ್ಯೆಗೀಡಾದರು. ಅವರು ಪ್ರಧಾನಿಯವರ ಅಗ್ನಿವೀರ್ ಯೋಜನೆಯಡಿ ತರಬೇತಿ ಪಡೆದಿದ್ದರೆ, ಸಾವಿನ ಸಂಖ್ಯೆ ಕೇವಲ 6ಕ್ಕೆ ನಿಲ್ಲುತ್ತಿತ್ತು. ಮೂವರು ಉಗ್ರರನ್ನೂ ಸಾಯಿಸಬಹುದಿತ್ತು ಎಂದು ಹೇಳಿದ್ದಾರೆ.

ಜಾಂಗ್ರ ಯಾವುದೋ ಸಾಹಸ ಮಯ ಸಿನಿಮಾವನ್ನು ನೋಡಿ ಬಂದು, ಮಾತನಾಡಿದಂತೆ ಮಾತನಾಡಿದ್ದಾರೆ. ಕೈಯಲ್ಲಿ ಗನ್ ಹಿಡಿದು ಬೇಕಾ ಬಿಟ್ಟಿ ಫೈರ್ ಮಾಡುತ್ತಿರುವ ಉಗ್ರರನ್ನು ನಿರಾಯುಧವಾಗಿರುವ ಮಹಿಳೆಯರು ಹೇಗೆ ಎದುರಿಸಬೇಕು ಎನ್ನುವ ಕಾಮನ್ ಸೆನ್ಸ್ ಕೂಡ ಅವರಿಗಿಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.

ಜಾಂಗ್ರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಖಂಡಿಸಿದೆ. ಈ ಹೇಳಿಕೆ ತಮ್ಮ ಪತಿಯರನ್ನು ಕಳೆದುಕೊಂಡ ಮಹಿಳೆಯರಿಗೆ ಮಾಡಿರುವ ಘೋರ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ