ಡಿಸಿಎಂ ಫ್ಲಾಗ್ ಹಿಡಿದು ಓಡಾಡಿದ್ದು ಅವರ ವೈಯಕ್ತಿಕ ವಿಚಾರ: RCB ವಿಜಯೋತ್ಸವ ದುರಂತ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ - Mahanayaka

ಡಿಸಿಎಂ ಫ್ಲಾಗ್ ಹಿಡಿದು ಓಡಾಡಿದ್ದು ಅವರ ವೈಯಕ್ತಿಕ ವಿಚಾರ: RCB ವಿಜಯೋತ್ಸವ ದುರಂತ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

sathish jarakiholi
07/06/2025


Provided by

ಚಿಕ್ಕಮಗಳೂರು:   ಬೆಂಗಳೂರಿನಲ್ಲಿ ಆರ್.ಸಿ.ಬಿ‌ ಅಭಿಮಾನಿಗಳ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು.

ತನಿಖೆಯಾಗಲಿ, ತಪ್ಪಿತಸ್ಥರು ಯಾರು ಅಂತ ವರದಿ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇನ್ನು ಒಂದು ಸ್ಟೆಪ್ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಘಟನೆ ಆಗಬಾರದಿತ್ತು, ಆಗಿದೆ. ಬಹಳ ಗೊಂದಲವಿದೆ, ಅನುಮತಿ ಬಗ್ಗೆ ತನಿಖೆಯಾಗಬೇಕು. ಸರ್ಕಾರ ಕೊಡ್ತಾ, ಸರ್ಕಾರಕ್ಕೆ ಗೊತ್ತಾಯ್ತಾ, ನಮಗೆ ಗೊತ್ತಾಯ್ತಾ, ಪೊಲೀಸರಿಗೆ ಗೊತ್ತಾಯ್ತಾ.. ತನಿಖೆಯಾಗಬೇಕು ಎಂದರು.

ಡಿಸಿಎಂ ಫ್ಲಾಗ್ ಹಿಡಿದು ಓಡಾಡಿದ್ದು ಅವರ ವೈಯಕ್ತಿಕ ವಿಚಾರ, ನ್ಯಾಯಧೀಶರ ನೇತೃತ್ವದಲ್ಲಿ ತನಿಖೆಗೆ ಬಿಜೆಪಿ ಆಗ್ರಹಿಸಿದೆ.  ಒಂದು ವರದಿ ಬರಲಿ, ಆಮೇಲೆ ಅವರಿಗೂ ಅವಕಾಶ ಇದೆ, ತನಿಖೆ ವರದಿ ಬರಲಿ ಎಂದರು.

ಬಿಜೆಪಿ ರಾಜ್ಯಗಳಲ್ಲೂ ಘಟನೆಗಳಾಗಿವೆ, ಕೇಂದ್ರದಲ್ಲಿ ಫೆಲ್ಯೂರ್ ಆಗಿದೆ, ಅದಕ್ಕೆ ಚಕಾರ ಎತ್ತಲ್ಲ  ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು,  ಭದ್ರತೆ ಲ್ಯಾಪ್ಸ್ ಆಗಿದೆ ಇಲ್ಲ ಅಂತ ಹೇಳಕ್ಕೆ ಆಗಲ್ಲ, ಮೊದಲು ವರದಿ ಬರಲಿ ಎಂದರು.

ಬೆಂಗಳೂರು ಕಮಿಷನರ್ ಅಮಾನತು ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿಎಂ ವರದಿ ತರಿಸಿಕೊಂಡಿರುತ್ತಾರೆ, ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿರುತ್ತೆ, ವರದಿ ಬರಲಿ, ತಪ್ಪಿಲ್ಲ ಅಂದ್ರೆ ಆಮೇಲೆ‌ ದಾರಿ ಇದೆ ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಸಿಎಂ ಮೀರಿ ಕಾರ್ಯಕ್ರಮ ಆಯೋಜನೆ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,  ನಾವು–ನೀವು ಹೇಳುದ್ರೆ ಆಗಲ್ಲ, ವರದಿ ಬರಲಿ, ತಿಂಗಳಲ್ಲಿ ಬರುತ್ತೆ ಆಮೇಲೆ ತೀರ್ಮಾನ ಮಾಡೋಣ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ