ವಿಪರೀತ ಮೊಬೈಲ್ ಬಳಕೆಯ ನೆಪವೊಡ್ಡಿ ಪತ್ನಿಯ ಬರ್ಬರ ಹತ್ಯೆ: ಪತಿಯ ಬಂಧನ - Mahanayaka

ವಿಪರೀತ ಮೊಬೈಲ್ ಬಳಕೆಯ ನೆಪವೊಡ್ಡಿ ಪತ್ನಿಯ ಬರ್ಬರ ಹತ್ಯೆ: ಪತಿಯ ಬಂಧನ

udupi crime news
20/06/2025

ಕುಂದಾಪುರ: ಪತ್ನಿ ವಿಪರೀತವಾಗಿ ಮೊಬೈಲ್ ಬಳಕೆ ಮಾಡ್ತಾ ಇದ್ದಾಳೆ ಎಂಬ ನೆಪವೊಡ್ಡಿ ಪತಿಯೊಬ್ಬ  ಪತ್ನಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾಮದ ಹೊಸಮಠ ಎಂಬಲ್ಲಿ ನಡೆದಿದೆ.


Provided by

ಜೂನ್ 19ರ ರಾತ್ರಿ 11:30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಹೊಸಮಠ ನಿವಾಸಿ ರೇಖಾ(27) ಹತ್ಯೆಯಾದ ಮಹಿಳೆಯಾಗಿದ್ದಾರೆ. ಪತಿ ಕೊಳಂಬೆ ಗ್ರಾಮ ನಿವಾಸಿ ಗಣೇಶ ಪೂಜಾರಿ(42) ಎಂಬಾತ ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ರೇಖಾ ಅವರನ್ನು ಗಣೇಶ್ ಪೂಜಾರಿ 8 ವರ್ಷಗಳ ಹಿಂದೆ ಮದುವೆಯಾಗಿದ್ದ. ಗಣೇಶ್ ಪೈಂಟಿಂಗ್ ವೃತ್ತಿ ಮಾಡುತ್ತಿದ್ದ. ಪತ್ನಿ ರೇಖಾ ಪೆಟ್ರೋಲ್ ಬಂಕ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು.

ಇತ್ತೀಚೆಗೆ ಮೊಬೈಲ್ ಬಳಕೆ ವಿಚಾರದಲ್ಲಿ ಆಗಾಗ ಗಣೇಶ್ , ರೇಖಾ ಜೊತೆಗೆ ಜಗಳವಾಡುತ್ತಿದ್ದ ಎನ್ನಲಾಗಿದೆ.  ಈ ಬಗ್ಗೆ  ಶಂಕರನಾರಾಯಣ ಪೊಲೀಸರಿಗೆ  ದೂರು ಕೂಡ ನೀಡಲಾಗಿತ್ತು. ಅವರು ಬುದ್ಧಿವಾದ ಹೇಳಿ ಮುಚ್ಚಳಿಕೆ ಬರೆಸಿಕೊಂಡು ಕಳುಹಿಸಿದ್ದರು. ಆದರೆ ಇದರ ನಂತರವೂ ಗಣೇಶ್ ತನ್ನ ಛಾಳಿ ಮುಂದುವರಿಸಿದ್ದಾನೆ. ಗುರುವಾರ ತಡರಾತ್ರ ಪತ್ನಿಯೊಂದಿಗೆ ಜಗಳವಾಡಿ ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಕೃತ್ಯದ ಬಳಿಕ ಆರೋಪಿ ಪರಾರಿಯಾಗಿದ್ದ. ಬಳಿಕ ಆರೋಪಿಯನ್ನು ಪತ್ತೆ ಹಚ್ಚಿದ ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೃತ ರೇಖಾ ಅವರಿಗೆ ಇಬ್ಬರು ಮಕ್ಕಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ