ದೆಹಲಿಯಲ್ಲಿ ನಟ ಅಮೀರ್ ಖಾನ್—ಸಿಎಂ ಸಿದ್ದರಾಮಯ್ಯ ಭೇಟಿ - Mahanayaka
12:53 PM Thursday 11 - December 2025

ದೆಹಲಿಯಲ್ಲಿ ನಟ ಅಮೀರ್ ಖಾನ್—ಸಿಎಂ ಸಿದ್ದರಾಮಯ್ಯ ಭೇಟಿ

siddaramaiah amir khan
24/06/2025

ದೆಹಲಿ: ಬಾಲಿವುಡ್ ನಟ, ನಿರ್ದೇಶಕ ಅಮೀರ್ ಖಾನ್ ಹಾಗೂ ಕರ್ನಾಟಕ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಭೇಟಿಯಾಗಿದ್ದು, ಪರಸ್ಪರ ಮಾತನಾಡುತ್ತಾ, ಕೈಕುಲುಕಿದ್ದಾರೆ.

ದೆಹಲಿಯಲ್ಲಿ ಇಂದು ಸಿಎಂ ಸಿದ್ದರಾಮಯ್ಯ ರಾಷ್ಟ್ರಪತಿಗಳ ಭೇಟಿಗಾಗಿ ತೆರಳಿದ್ದ ವೇಳೆ ಆಕಸ್ಮಿಕವಾಗಿ ಅಮೀರ್ ಖಾನ್ ಎದುರಾಗಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಅಮೀರ್ ಖಾನ್ ಪರಸ್ಪರ ಭೇಟಿಯಾಗಿದ್ದು, ಅವರ ಮುಂದಿನ ಚಿತ್ರಗಳಿಗೆ ಶುಭ ಹಾರೈಸಿದ ಸಿಎಂ, ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆ ಸಲಹೆ ಕೂಡ ನೀಡಿದ್ದಾರೆ.

ಈ ಬಗ್ಗೆ  ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ, ದೆಹಲಿಯಲ್ಲಿ ಇಂದು ರಾಷ್ಟ್ರಪತಿಗಳ ಭೇಟಿಗಾಗಿ ರಾಷ್ಟ್ರಪತಿ ಭವನಕ್ಕೆ ತೆರಳಿದ ವೇಳೆ ಬಾಲಿವುಡ್‌ ನ ಸಂವೇದನಾಶೀಲ ನಟ, ನಿರ್ದೇಶಕ ಅಮಿರ್ ಖಾನ್ ಅವರು ಆಕಸ್ಮಿಕವಾಗಿ ಎದುರಾದರು ಎಂದು ತಿಳಿಸಿದ್ದಾರೆ.

ಸಿನೆಮಾ ಮೂಲಕ ಸಮಾಜಕ್ಕೆ ಉತ್ತಮ‌ ಸಂದೇಶ ನೀಡುವ, ಧನಾತ್ಮಕ ಬದಲಾವಣೆಗೆ ತುಡಿಯುವ ಅವರೊಳಗಿನ ಸಮಾಜಮುಖಿ ವ್ಯಕ್ತಿತ್ವ ನಟನೆಯನ್ನು ಮೀರಿ ಜನರಿಗೆ ಅವರನ್ನು ಹೆಚ್ಚು ಆಪ್ತವಾಗಿಸಿದೆ ಎಂದು ಸಿಎಂ ಹೇಳಿದ್ದಾರೆ.

ಅವರ ಮುಂದಿನ ಚಿತ್ರಗಳಿಗೆ ಶುಭವಾಗಲಿ ಎಂದು ಹಾರೈಸಿ, ಆರೋಗ್ಯದ ಕಾಳಜಿಯೂ ವಹಿಸುವಂತೆ ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ