ವೃದ್ಧಾಶ್ರಮಕ್ಕೆ ಸೇರಿಸಿದ ಪುತ್ರ: ವೃದ್ಧ ದಂಪತಿ  ಆತ್ಮಹತ್ಯೆಗೆ ಶರಣು - Mahanayaka
12:02 PM Wednesday 28 - January 2026

ವೃದ್ಧಾಶ್ರಮಕ್ಕೆ ಸೇರಿಸಿದ ಪುತ್ರ: ವೃದ್ಧ ದಂಪತಿ  ಆತ್ಮಹತ್ಯೆಗೆ ಶರಣು

bangalore news
25/06/2025

ಬೆಂಗಳೂರು: ವೃದ್ಧಾಶ್ರಮದಲ್ಲಿದ್ದ ವೃದ್ಧ ದಂಪತಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಜೆ.ಪಿ.ನಗರದ 8ನೇ ಹಂತದಲ್ಲಿ ನಡೆದಿದೆ.

ಕೃಷ್ಣಮೂರ್ತಿ (81), ರಾಧಾ (74) ಆತ್ಮಹತ್ಯೆಗೆ ಶರಣಾದ ವೃದ್ಧ ದಂಪತಿಗಳಾಗಿದ್ದಾರೆ. ಇವರ ಆತ್ಮಹತ್ಯೆಗೆ ನಿಖರ ಕಾರಣಗಳು ಲಭ್ಯವಾಗಿಲ್ಲ.

ವರದಿಗಳ ಪ್ರಕಾರ, ಸೊಸೆ ಮಾಡಿದ ಅಡುಗೆ ಇಷ್ಟವಿಲ್ಲ, ಹೊಂದಾಣಿಕೆಯಾಗದ ಕಾರಣ ಬೇರ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ಪುತ್ರ 2021ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದನು. 2023ರಲ್ಲಿ ತಂದೆ, ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದನು. ವೃದ್ಧಾಶ್ರಮದಿಂದ ವಾಪಸ್​ ಬಂದ ನಂತರ ವೃದ್ಧ ದಂಪತಿಗೆ ಮನೆಯಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ತಂದೆ, ತಾಯಿಯನ್ನು ಪುತ್ರ ಸೇರಿಸಿದ್ದನು.  ಆದರೆ, ವೃದ್ಧ ದಂಪತಿ ಮೊನ್ನೆ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಟಿವಿ ನೋಡುವ ವಿಚಾರಕ್ಕೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಹೇಳಿದ್ದಾರೆನ್ನಲಾಗಿದೆ. ಸದ್ಯ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ