ಕೇವಲ 5 ಹುದ್ದೆಗೆ ಕೆನಡಾದಲ್ಲಿ ಸಾವಿರಾರು ಅಭ್ಯರ್ಥಿಗಳ ಬೃಹತ್ ಸರತಿ ಸಾಲು!

ವಿದೇಶದಲ್ಲಿ ಉದ್ಯೋಗ ಎಲ್ಲರ ಕನಸು, ಆದ್ರೆ ವಿದೇಶದಲ್ಲಿ ಉದ್ಯೋಗ ಪಡೆದುಕೊಳ್ಳುವುದು ಸುಲಭದ ಕೆಲಸವೇ ಎಂದರೆ ಖಂಡಿತಾ ಅಲ್ಲ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆಯದ್ದೇ ಆದ ಸವಾಲುಗಳಿರುತ್ತವೆ. ಇಲ್ಲೊಬ್ಬರು ಯುವತಿ ಕೆನಡಾದಲ್ಲಿ ಉದ್ಯೋಗ ಮೇಳದಲ್ಲಿ ಸರತಿ ಸಾಲಿನಲ್ಲಿ ನಿಂತಿರುವ ಅಭ್ಯರ್ಥಿಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ವಿದೇಶಿ ಉದ್ಯೋಗದ ವಾಸ್ತವ ಸ್ಥಿತಿಯನ್ನು ಬಹಿರಂಗಗೊಳಿಸಿದ್ದಾರೆ.
ಕೆನಡಾದಲ್ಲಿ ಡಜನ್ ಗಟ್ಟಲೆ ಭಾರತೀಯರು ಮತ್ತು ಇತರ ವಿದೇಶಿ ವಿದ್ಯಾರ್ಥಿಗಳು ಸಾಧಾರಣ ಉದ್ಯೋಗ ಮೇಳದಲ್ಲಿ ಉದ್ಯೋಗ ಹುಡುಕಲು ಸಾಲುಗಟ್ಟಿ ನಿಂತಿರುವ ವಿಡಿಯೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿರುವ ಯುವತಿ, ವಿದೇಶದಲ್ಲಿ ಉತ್ತಮ ಉದ್ಯೋಗಾವಕಾಶಗಳು ಇರುತ್ತವೆ, ಅದರಿಂದ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎನ್ನುವ ಕನಸು ಭಾರತೀಯರಲ್ಲಿ ಸಾಮಾನ್ಯವಾಗಿರುತ್ತದೆ. ಆದರೆ, ಇಲ್ಲಿ ಉದ್ಯೋಗಕ್ಕಾಗಿ ಇರುವ ಪೈಪೋಟಿ ಹೀಗಿದೆ ನೋಡಿ ಎಂದು ಯುವತಿ ಹೇಳಿಕೊಂಡಿದ್ದಾರೆ.
ಉದ್ಯೋಗ ಮೇಳದಲ್ಲಿ ಸಾವಿರಾರು ಅಭ್ಯರ್ಥಿಗಳು ಭಾಗಿಯಾಗಿದ್ದರೂ, ಅವರಲ್ಲಿ ಕೇವಲ 5ರಿಂದ 6 ಜನರನ್ನು ಮಾತ್ರವೇ ನೇಮಕ ಮಾಡಿಕೊಳ್ಳಲಾಗುತ್ತದೆ. ಇದು ಕೆನಡಾದ ವಾಸ್ತವ. ನೀವು ಇದಕ್ಕೆ ಸಿದ್ಧರಾಗಿದ್ದರೆ ಮಾತ್ರವೇ ಕೆನಡಾಕ್ಕೆ ಬನ್ನಿ, ಇಲ್ಲವಾದರೆ, ಭಾರತವೇ ನಮಗೆ ಉತ್ತಮ ಎಂದು ಹೇಳಿದ್ದಾರೆ.
ಈ ವಿಡಿಯೋ ಕೆನಡಾದಲ್ಲಿ ಸೃಷ್ಟಿಯಾಗಿರುವ ನಿರುದ್ಯೋಗದ ಪ್ರಮಾಣವನ್ನು ತೋರಿಸುವಂತಿದೆ ಎಂದು ಹಲವು ಸಾಮಾಜಿಕ ಬಳಕೆದಾರರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ.
View this post on Instagram
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: