ಮಳೆಗೆ ಜಾರುತ್ತಿರುವ ಎತ್ತಿನ ಭುಜದಲ್ಲಿ ಟ್ರಕ್ಕಿಂಗ್ ಬೇಕೆ?

ಚಿಕ್ಕಮಗಳೂರು: ನಿರಂತರ ಮಳೆಯಿಂದಾಗಿ ಜಾರುತ್ತಿರುವ ಗುಡ್ಡ ಮೂಡಿಗೆರೆ ಎತ್ತಿನಭುಜದಲ್ಲಿ ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಆದರೆ ಮಳೆಗಾಲದಲ್ಲಿ ಇಲ್ಲಿನ ಸುರಕ್ಷತೆಯ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸುಮಾರು 7 ಕಿ.ಮೀ. ಚಾರಣ ಮಾಡಿ ಎತ್ತಿನ ಭುಜಕ್ಕೆ ಪ್ರವಾಸಿಗರು ಹೋಗುತ್ತಾರೆ. ಈ ಪ್ರದೇಶದಲ್ಲಿ ನೆಟ್ ವರ್ಕ್ ಸಮಸ್ಯೆ ಕೂಡ ಇದೆ. ಅಲ್ಲದೇ ವನ್ಯ ಮೃಗಗಳ ಓಡಾಟ ಕೂಡ ಇದೆ. ಹಾಗಾಗಿ ಏನಾದರೂ ಅನಾಹುತಗಳು ಸಂಭವಿಸಿದ್ರೆ, ತಕ್ಷಣವೇ ಸ್ಪಂದಿಸಲು, ರಕ್ಷಣಾ ಕಾರ್ಯಾಚರಣೆ ನಡೆಸಲು ಸಾಧ್ಯವಿಲ್ಲ ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ಪ್ರದೇಶದಲ್ಲಿ ಗಂಟೆಗೆ 10–10 ಇಂಚು ಮಳೆ ಸುರೀತಿದೆ, ನಿರಂತರ ಮಳೆಯಿಂದ ಗುಡ್ಡ ಹತ್ತುವ ಮಾರ್ಗ ಜಾರುತ್ತಿದೆ. ಅತೀ ಹೆಚ್ಚು ಮಳೆ, ಧರೆ ಕುಸಿತ, ಪ್ರವಾಹದಿಂದ ಚಾರಣ ಪ್ರಿಯರಿಗೆ ಏದರೂ ತೊಂದರೆ ಎದುರಾದ್ರೆ ಹೊಣೆ ಯಾರು …? ಅಂತ ಸ್ಥಳೀಯರು ಪ್ರಶ್ನೆ ಮಾಡುತ್ತಿದ್ದಾರೆ.
ಅರಣ್ಯ ಇಲಾಖೆಯ ಮೂಲಕ ಆನ್ ಲೈನ್ ನಲ್ಲಿ ಬುಕ್ಕಿಂಗ್ ಮಾಡ್ಕೊಂಡು ಚಾರಣ ಪ್ರಿಯರು ಬರುತ್ತಾರೆ, ಸುಮಾರು 7 ಕಿ.ಮೀ. ಚಾರಣ ಮಾಡಿ ಎತ್ತಿನ ಭುಜಕ್ಕೆ ತಲುಪುತ್ತಾರೆ. ಚಾರಣ ಪ್ರಿಯರ ಸುರಕ್ಷತೆಗೆ ಸರಿಯಾದ ಕ್ರಮ ಕೈಗೊಳ್ಳಬೇಕು, ಇಲ್ಲವೇ ಶಿಶಿಲ–ಬೈರಾಪುರ ಗುಡ್ಡದಲ್ಲಿ ಚಾರಣಕ್ಕೆ ಬ್ರೇಕ್ ಹಾಕುವಂತೆ ಒತ್ತಾಯ ಕೇಳಿ ಬಂದಿದೆ.
ದಾಖಲೆ ಮಳೆಯಾಗೋ ಘಟ್ಟ ಪ್ರದೇಶದಲ್ಲಿ ಚಾರಣಕ್ಕೆ ಅವಕಾಶ ನೀಡುವ ವೇಳೆ ಕನಿಷ್ಠ ಸುರಕ್ಷತಾ ಕ್ರಮಗಳನ್ನಾದರೂ ಅರಣ್ಯ ಇಲಾಖೆ ವಹಿಸಬೇಕು. ಇದು ಸಾಧ್ಯವಾಗದಿದ್ದರೆ, ಮೂಡಿಗೆರೆ ಎತ್ತಿನಭುಜದಲ್ಲಿ ಟ್ರಕ್ಕಿಂಗ್ ಕ್ಯಾನ್ಸಲ್ ಮಾಡುವಂತೆ ಒತ್ತಾಯ ಕೇಳಿ ಬಂದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: