ರೂಪದರ್ಶಿಯ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ | ವಿಡಿಯೋ ತೋರಿಸಿ ಬೆದರಿಕೆ - Mahanayaka
1:59 PM Thursday 4 - December 2025

ರೂಪದರ್ಶಿಯ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ | ವಿಡಿಯೋ ತೋರಿಸಿ ಬೆದರಿಕೆ

video
12/04/2021

ಬೆಂಗಳೂರು: ರೂಪದರ್ಶಿ ಮೇಲೆ ಪ್ರಿಯಕರನೇ ಅತ್ಯಾಚಾರ ನಡೆಸಿ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿರುವ ಬಗ್ಗೆ  ಯಶವಂತಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿ ಈ ಕೃತ್ಯ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ನಗರದಲ್ಲಿ ವಾಸಿಸುತ್ತಿರುವ ಮಾಡೆಲ್ ಗೆ ಫೇಸ್ ಬುಕ್ ನಲ್ಲಿ ಪ್ರಮೋದ್ ಎಂಬಾತ ಪರಿಚಯವಾಗಿದೆ. ಪರಿಚಯದ ಬಳಿಕ ಇವರಿಬ್ಬರು ಪ್ರೀತಿಸಿದ್ದು, ಆ ಬಳಿಕ  ಇವರಿಬ್ಬರು ಮದುವೆಯಾಗುವುದಾಗಿಯೂ ನಿರ್ಧರಿಸಿದ್ದರು.

ಈ ನಡುವೆ ಯುವತಿಗೆ  ಜ್ಯೂಸ್ ನಲ್ಲಿ ಮತ್ತು ಬರುವ ಔಷಧಿ ಮಾತ್ರೆ ಬೆರೆಸಿ, ತನ್ನ ಪ್ರೇಯಸಿಗೆ ಕುಡಿಸಿದ ಪ್ರಮೋದ್ , ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದು, ಇದನ್ನು ವಿಡಿಯೋ ಕೂಡ ಮಾಡಿಕೊಂಡಿದ್ದು, ಆ ಬಳಿಕ ತನ್ನ ಗೆಳೆಯ ಧನಂಜಯ್ ಎಂಬಾತನನ್ನು ಕರೆತಂದು ಆತನಿಂದಲೂ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.

ವಿಡಿಯೋ ಇಟ್ಟು ಕೊಂಡ ಆತ, ನಾನು ಕರೆದಾಗಲೆಲ್ಲ ಬರಬೇಕು ಇಲ್ಲವಾದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಯುವತಿಯನ್ನು ಬೆದರಿಸಿದ್ದಾನೆ. ಹೀಗೆ ಬೆದರಿಸಿ, ತನಗೆ 16 ಬಾರಿ ಲೈಂಗಿಕ ಕಿರುಕುಳ ನಡೆಸಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಇತ್ತೀಚಿನ ಸುದ್ದಿ