ಕೈಯಿಂದ ಊಟ ಮಾಡುವುದು ಅನಾಗರಿಕತೆ!: ಭಾರತೀಯ ಮೂಲದ ಅಮೆರಿಕ ಮೇಯರ್ ಅಭ್ಯರ್ಥಿಗೆ ಅವಮಾನ!

ವಾಷಿಂಗ್ಟನ್ ಡಿಸಿ: ಅಮೆರಿಕದ ನ್ಯೂಯಾರ್ಕ್ ನಗರದ ಮೇಯರ್ ಅಭ್ಯರ್ಥಿ ಭಾರತೀಯ ಮೂಲದ ಜೋಹ್ರಾನ್ ಮಮ್ದಾನಿ(Zohran Mamdani )ಕೈಯಲ್ಲಿ ಊಟ ಮಾಡಿದ್ದಕ್ಕೆ ವಿರೋಧಿ ಪಕ್ಷದವರು ಅನಾಗರಿಕ, ಭಯೋತ್ಪಾದಕ ಎಂದು ಕರೆದಿದ್ದಾರೆ.
ಡೆಮಾಕ್ರಟಿಕ್ ಮೇಯರ್ ಅಭ್ಯರ್ಥಿ ಪ್ರಾಥಮಿಕ ಚುನಾವಣೆಯಲ್ಲಿ ಜಯಗಳಿಸಿರುವ ಜೋಹ್ರಾನ್ ಮಮ್ದಾನಿ, ಸಂದರ್ಶನ ವಿಡಿಯೋವೊಂದರಲ್ಲಿ ಊಟ ಮಾಡುತ್ತಿದ್ದು, ಅವರು ಕೈಯಿಂದ ಊಟ ಮಾಡುತ್ತಿದ್ದಾರೆ. ಈ ವಿಡಿಯೋವನ್ನು ಬಳಸಿಕೊಂಡು ರಿಪಬ್ಲಿಕನ್ ಪ್ರತಿನಿಧಿಗಳು ಟೀಕಿಸಿದ್ದಾರೆ.
ಟೆಕ್ಸಾಸ್ ನ ರಿಪಬ್ಲಿಕನ್ ಕಾಂಗ್ರೆಸ್ ಪ್ರತಿನಿಧಿ ಬ್ರಾಂಡನ್ ಗಿಲ್, ಅಮೆರಿಕದಲ್ಲಿ ನಾಗರಿಕ ಜನರು ಈ ರೀತಿ ತಿನ್ನುವುದಿಲ್ಲ. ನೀವು ಪಾಶ್ಚಿಮಾತ್ಯ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನಿರಾಕರಿಸುವುದಾದರೆ, ನಿಮ್ಮ ಮೂರನೇ ಜಗತ್ತಿಗೆ ಹಿಂತಿರುಗಿ” ಎಂದು ಕೈಯಿಂದ ಊಟ ಮಾಡುವ ಪದ್ಧತಿಯನ್ನು ಅಣಕಿಸಿದ್ದಾರೆ.
2023ರಲ್ಲಿ ಅನ್‌ಸಿವಿಲೈಸ್ಡ್ ಮೀಡಿಯಾಗೆ ನೀಡಿದ ಸಂದರ್ಶನದಲ್ಲಿ, ಜೋಹ್ರಾನ್ ಮಮ್ದಾನಿ ಕೈಯಿಂದ ಊಟ ಮಾಡುತ್ತಾ ಹಲವು ವಿಷಯಗಳ ಕುರಿತು ಚರ್ಚಿಸಿದ್ದರು. ಈ ವಿಡಿಯೋವನ್ನು ಇದೀಗ ವಿರೋಧ ಪಕ್ಷಗಳು ಬಳಕೆ ಮಾಡಿಕೊಂಡು ಜೋಹ್ರಾನ್ ಮಮ್ದಾನಿ ಅವರನ್ನು ಟೀಕಿಸಿದ್ದಾರೆ.
ನವೆಂಬರ್‌ನಲ್ಲಿ ಘೋಷಣೆಯಾಗಲಿರುವ ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಆಯ್ಕೆಯಾದರೆ, ಜೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೊದಲ ಭಾರತೀಯ ಮೂಲದ ಮುಸ್ಲಿಂ ಮೇಯರ್ ಆಗಿ ಇತಿಹಾಸ ನಿರ್ಮಿಸಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: