ಎಮ್ಮೆಗಳನ್ನು ರಕ್ಷಿಸಲು ಹೋದ ವ್ಯಕ್ತಿ ವಂದೇ ಭಾರತ್ ರೈಲು ಡಿಕ್ಕಿಯಾಗಿ ಸಾವು!

ಪಾಟ್ನಾ: ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು(Vande Bharat Train) ಎಮ್ಮೆಗಳಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದ 50 ವರ್ಷದ ವ್ಯಕ್ತಿಯೊಬ್ಬರು ರೈಲು ಡಿಕ್ಕಿಯಾಗಿ ಸಾವನ್ನಪ್ಪಿರುವ ಘಟನೆ ಶೇಖ್ ಪುರ ಬಳಿ ನಡೆದಿದೆ.
ಪೂರ್ವ ಮಧ್ಯ ರೈಲ್ವೆ (ಇಸಿಆರ್) ನ ದಾನಾಪುರ ವಿಭಾಗದ ನವಾಡಾ–ಕಿಯುಲ್ ವಿಭಾಗದಲ್ಲಿ ಬೆಳಿಗ್ಗೆ 11 ಗಂಟೆಗೆ ಈ ಘಟನೆ ಸಂಭವಿಸಿದೆ. ವಾರಣಾಸಿ-ದಿಯೋಘರ್ ವಂದೇ ಭಾರತ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದ ಪರಿಣಾಮ ಗೋಪಾಲ್ ಯಾದವ್(50) ಸಾವನ್ನಪ್ಪಿದ್ದಾರೆ.
ಎಮ್ಮೆಗಳು ದಾರಿ ತಪ್ಪಿ ಹಳಿಗಳ ಮೇಲೆ ಸಾಗುತ್ತಿದ್ದವು, ಈ ವೇಳೆ ವೇಗವಾಗಿ ಬಂದ ವಂದೇ ಭಾರತ್ ಎಕ್ಸ್ ಪ್ರೆಸ್ ಎಮ್ಮೆಗಳಿಗೆ ಡಿಕ್ಕಿ ಹೊಡೆಯುವ ಸಾಧ್ಯತೆ ಕಂಡ ಗೋಪಾಲ್ ಯಾದವ್, ಎಮ್ಮೆಗಳನ್ನು ರಕ್ಷಿಸಲು ಮುಂದಾಗಿದ್ದಾರೆ. ಎಮ್ಮೆಗಳ ಬಳಿಗೆ ಯಾದವ್ ತಲುಪಿದಾಗ ರೈಲು ಡಿಕ್ಕಿ ಹೊಡೆದಿದೆ.
ರೈಲು ಡಿಕ್ಕಿ ಹೊಡೆದ ತೀವ್ರತೆಗೆ ಯಾದವ್ ಅವರ ದೇಹ ಛಿದ್ರಛಿದ್ರಗೊಂಡಿದೆ. ಘಟನೆಯಿಂದ ಸುಮಾರು ಅರ್ಧ ಗಂಟೆಗಳ ಕಾಲ ರೈಲು ಸೇವೆಗಳು ಸ್ಥಗಿತಗೊಂಡವು ಮತ್ತು ಲೋಕೋಮೋಟಿವ್ ನ ಮುಂಭಾಗವು ಭಾಗಶಃ ಹಾನಿಗೊಳಗಾಯಿತು.
ಈ ಮಾರ್ಗವು ಜಾನುವಾರು ದಾಟುವಿಕೆಗಳಿಗೆ ಹೆಸರುವಾಸಿಯಾಗಿದೆ, ಆದರೆ ಈ ಮಾರ್ಗದಲ್ಲಿ ವಂದೇ ಭಾರತ್ ನಂತಹ ಅರೆ ಹೈಸ್ಪೀಡ್ ರೈಲುಗಳನ್ನು ಪರಿಚಯಿಸಿದ ನಂತರವೂ ಯಾವುದೇ ಬೇಲಿ ಅಥವಾ ಬ್ಯಾರಿಕೇಡ್ ಗಳನ್ನು ಅಳವಡಿಸಲಾಗಿಲ್ಲ” ಎಂದು ಮೃತರ ನೆರೆಹೊರೆಯ ಸುರೇಂದ್ರ ರಾಮ್ ಟೀಕಿಸಿದರು. ಮೃತ ಗೋಪಾಲ್ ಯಾದವ್ ಅವರು ಪತ್ನಿ ಹಾಗೂ ನಾಲ್ಕು ಅಪ್ರಾಪ್ತ ವಯಸ್ಕ ಮಕ್ಕಳನ್ನು ಅಗಲಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: