ಹೃದಯಾಘಾತದಿಂದ 29 ವರ್ಷದ ತೆಂಗಿನ ಕಾಯಿ ವ್ಯಾಪಾರಿ ಸಾವು!

ಚಿಕ್ಕಮಗಳೂರು: ಹೃದಯಾಘಾತದಿಂದ ತೆಂಗಿನಕಾಯಿ ವ್ಯಾಪಾರಿ ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಶಿವನಿ ಗ್ರಾಮದಲ್ಲಿ ನಡೆದಿದೆ.
29 ವರ್ಷದ ಹರೀಶ್ ಮೃತ ಯುವಕನಾಗಿದ್ದು, ನಿನ್ನೆ ಬೆಳಿಗ್ಗೆ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಯುವಕ ಸಾವನ್ನಪ್ಪಿದ್ದಾರೆ.
ಮೃತ ಹರೀಶ್, ತೆಂಗಿನಕಾಯಿ ವ್ಯಾಪಾರ ಮಾಡುತ್ತಿದ್ದರು. ನಿನ್ನೆ ಬೆಳಗಿನ ಜಾವ 2.30ಕ್ಕೆ ಹರೀಶ್ ಗೆ ವಾಂತಿಯಾಗಿತ್ತು. ಗ್ಯಾಸ್ಟ್ರಿಕ್ ನಿಂದ ವಾಂತಿಯಾಗಿರಬಹುದು ಎಂದು ಮನೆಯವರು ಗ್ಯಾಸ್ಟ್ರಿಕ್ ಎಂದು ಮಾತ್ರೆ ನುಂಗಿಸಿ ಮಲಗಿಸಿದ್ದರು.
3.30ಕ್ಕೆ ಮತ್ತೆ ವಾಂತಿಯಾಗಿದ್ದು, ಹರೀಶ್ ತೀವ್ರ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಅಜ್ಜಂಪುರ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ ಅದಕ್ಕೂ ಮುನ್ನ ಅವರು ಸಾವನ್ನಪ್ಪಿದ್ದಾರೆ.
ಹರೀಶ್ ಅವಿವಾಹಿತರಾಗಿದ್ದಾರೆ. ತೆಂಗಿನಕಾಯಿ ವ್ಯಾಪಾರದ ಜೊತೆ ತೋಟ ನೋಡಿಕೊಂಡಿದ್ದರು. ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು ಶಿವನಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: