ಮನೆಯ ಮುಂದೆ ಬಂದು ನಿಂತ ಒಂಟಿ ಸಲಗ! - Mahanayaka

ಮನೆಯ ಮುಂದೆ ಬಂದು ನಿಂತ ಒಂಟಿ ಸಲಗ!

wild elephant
03/07/2025

ಚಿಕ್ಕಮಗಳೂರು:  ಕಾಫಿನಾಡಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು, ಒಂಟಿ ಸಲಗ(Wild Elephant) ವೊಂದು  ಮನೆಯೊಂದರ ಬಳಿ ಬಂದು ನಿಂತ ಘಟನೆ ಚಿಕ್ಕಮಗಳೂರು ತಾಲೂಕಿನ ಐದಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯ ಮುಂದೆ ಬಂದು ನಿಂತ ಕಾಡಾನೆ, ಮನೆ ಮುಂದಿದ್ದ ಪಾಟಿನಲ್ಲಿದ್ದ ಗಿಡವನ್ನ ತಿಂದು ಹಾಕಿದೆ. ಆನೆ ಬಂದು ಹೋಗುತ್ತಿರುವ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಲ್ದೂರು ಸುತ್ತಮುತ್ತಲಿನ ಜನ ಕಾಡಾನೆಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ತೋಟದಲ್ಲಿದ್ದ ಬಾಳೆ, ತೆಂಗು, ಅಡಿಕೆಯನ್ನ ಒಂಟಿ ಸಲಗಗಳು  ನಾಶಪಡಿಸುತ್ತಿವೆ.

ನಿರಂತರ ಆನೆಗಳ ಹಾವಳಿಯಿಂದ ಆಲ್ದೂರು ಸುತ್ತಮುತ್ತಲಿನ ಜನ ಹೈರಾಣಾಗಿದ್ದು, ಅರಣ್ಯಾಧಿಕಾರಿಗಳು ಕಾಡಾನೆಗಳನ್ನು ಸ್ಥಳಾಂತರಿಸಲು ಒತ್ತಾಯಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ