ಯಶ್ ಮೇಲೆ ಮುನಿಸಿ ಕೊಂಡ್ರಾ ತಾಯಿ ಪುಷ್ಪಾ!

ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಇದೀಗ ನಿರ್ಮಾಪಕಿಯಾಗಿದ್ದಾರೆ. ‘ಕೊತ್ತಲವಾಡಿ’ ಚಿತ್ರಕ್ಕೆ ಪುಷ್ಪಾ ಅರುಣ್ ಕುಮಾರ್ ಬಂಡವಾಳ ಹಾಕಿದ್ದಾರೆ. ಆಗಸ್ಟ್ 1 ರಂದು ‘ಕೊತ್ತಲವಾಡಿ’ ಚಿತ್ರ ರಿಲೀಸ್ ಆಗಲಿದೆ. ಇದೇ ವೇಳೆ ಯಶ್ ಬಗ್ಗೆ ಅವರು ಮಾತನಾಡಿರುವ ಹೇಳಿಕೆಗಳು ತಾಯಿ ಮಗನ ನಡುವೆ ಮುನಿಸು ಇರುವಂತೆ ಕಂಡು ಬಂದಿದ್ದು, ಚರ್ಚೆಗೀಡಾಗಿದೆ.
ಅಮ್ಮನ ಮೊದಲ ಸಿನಿಮಾಗೆ ಯಶ್… ಇರುತ್ತಾರ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ’ನಮ್ಮ ಮನೆಯಲ್ಲಿ ಆ ತರಹ ಸೆಂಟಿಮೆಂಟ್ ಇಟ್ಟುಕೊಂಡಿಲ್ಲ, ನಾವು ಮನೆ ಕಟ್ಟಿ ಗೃಹಪ್ರವೇಶ ಮಾಡಿದರೂ, ಅವನಿಲ್ಲ ಅಂದ್ರೆ ಸುಮ್ಮನೆ ಮಾಡ್ತೀವಿ. ಅದೆಲ್ಲಾ ಸೆಂಟಿಮೆಂಟ್ ವರ್ಕ್ ಆಗಲ್ಲ ಎಂದಿದ್ದಾರೆ.
ಯಶ್, ರಾಧಿಕಾ ಪಂಡಿತ್ ಫಸ್ಟ್ ಡೇ ಫಸ್ಟ್ ಶೋ ನೋಡ್ತಾರಾ? ಅಂತ ಕೇಳಿದಾಗ, ಅದನ್ನ ಅವರನ್ನ ಕೇಳಿ. ನಾನು ನಿಮ್ಮನ್ನ ಕರೀತೀನಿ. ನೀವು ಬರಲಿಲ್ಲ ಅಂದ್ರೆ ನಾನೇನು ಮಾಡ್ಲಿ.. ಎಂದಿದ್ದಾರೆ.
‘’ಮಗ ಅಲ್ವಾ?’’ ಎಂದು ಮಾಧ್ಯಮ ಪ್ರತಿನಿಧಿ ಕೇಳಿದಾಗ, ಮಗ ಆದ ತಕ್ಷಣ ನನ್ನ ಮಾತನ್ನ ಕೇಳಬೇಕು ಅಂತ ರೂಲ್ಸ್ ಇಲ್ಲ ಎಂದು ಪುಷ್ಪಾ ಹೇಳಿದರು.
ಯಶ್ ಟೀಸರ್ ನೋಡಿದ್ದಾರೆ. ನಾವು ಯಾರಿಗೂ ಇನ್ನೂ ಸಿನಿಮಾ ತೋರಿಸಿಲ್ಲ ಅಂತಲೂ ಇದೇ ವೇಲೆ ಪುಷ್ಪಾ ಸ್ಪಷ್ಟ ಪಡಿಸಿದರು.
ಅವನು ಚಿತ್ರ ನೋಡ್ತಾನೋ, ಇಲ್ವೋ.. ನಾನು ಎಕ್ಸ್ ಪೆಕ್ಟ್ ಮಾಡಲ್ಲ. ಆಡಿಯೆನ್ಸ್ ನೋಡಬೇಕು. ಅದು ಮುಖ್ಯ. ಯಶ್ ನೋಡಿದ ತಕ್ಷಣ ಸಿನಿಮಾ ಓಡಿಬಿಡುತ್ತದಾ? ನನ್ನ ದುಡ್ಡು ವಾಪಸ್ ಬರುತ್ತಾ? ಮಗನ ಒಪೀನಿಯನ್ ನನಗೆ ಬೇಕಿಲ್ಲ. ಆಡಿಯೆನ್ಸ್ ಒಪೀನಿಯನ್ ನನಗೆ ಮುಖ್ಯ. ಸುದೀಪ್, ದರ್ಶನ್, ಯಶ್, ಪುನೀತ್ ರಾಜ್‌ಕುಮಾರ್, ಧ್ರುವ ಸರ್ಜಾ.. ಎಲ್ಲರ ಅಭಿಮಾನಿಗಳು ಸಿನಿಮಾ ನೋಡಿ ಅಭಿಪ್ರಾಯ ಹೇಳಿ ಎಂದು ಅವರು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: