ಸ್ಮೃತಿ ಇರಾನಿ ಮತ್ತೆ ಸೀರಿಯಲ್ ನಲ್ಲಿ ನಟಿಸಲಿದ್ದಾರೆ: 15 ವರ್ಷಗಳ ನಂತರ ಮತ್ತೆ ಬಣ್ಣದ ಲೋಕಕ್ಕೆ

ನವದೆಹಲಿ: ಕಳೆದ 15 ವರ್ಷಗಳಿಂದ ಬಣ್ಣದ ಲೋಕದಿಂದ ದೂರ ಉಳಿದಿದ್ದ ರಾಜಕಾರಣಿ, ನಟಿ ಸ್ಮೃತಿ ಇರಾನಿ ಮತ್ತೆ ಬಣ್ಣ ಹಚ್ಚಲು ಮುಂದಾಗಿದ್ದು, ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸ್ಮೃತಿ ಇರಾನಿ ಈ ಬಗ್ಗೆ ಬಿಗ್ ಅಪ್ ಡೇಟ್ ನೀಡಿದ್ದಾರೆ.
2000ರಿಂದ 2008ರವರೆಗೆ ಖಾಸಗಿ ವಾಹಿನಿಯಲ್ಲಿ ಪ್ರದರ್ಶನಗೊಂಡಿದ್ದ ‘ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ’ ಎಂಬ ಧಾರವಾಹಿಯಲ್ಲಿ ಸ್ಮೃತಿ ಇರಾನಿ ಜನಪ್ರಿಯತೆ ಗಳಿಸಿದ್ದರು. ಈ ಧಾರವಾಹಿಯಲ್ಲಿ ವ್ಯಾಪಾರಸ್ಥರ ಕುಟುಂಬದಲ್ಲಿನ ಕಥೆಯನ್ನು ಚಿತ್ರಿಸಲಾಗಿತ್ತು. ವ್ಯಾಪಾರಸ್ತೆ ಕುಟುಂಬಗಳ ಆಗು ಹೋಗುಗಳು ಈ ಧಾರಾವಾಹಿಯ ಕಥೆಯಾಗಿತ್ತು.
ಸುಮಾರು 1,800 ಎಪಿಸೋಡ್ ಪ್ರದರ್ಶನ ಕಂಡಿದ್ದ ಧಾರಾವಾಹಿ 25 ವರ್ಷಗಳ ಕಾಲ ಪ್ರದರ್ಶನಗೊಂಡಿತ್ತು. ಇದೀಗ ಇದೇ ಸೀರಿಯಲ್ ಹೊಸ ರೂಪದಲ್ಲಿ ಬರಲಿದೆ, ಜುಲೈ 29ರಿಂದ ಸ್ಟಾರ್ ಪ್ಲಸ್ ಮತ್ತು ಜಿಯೋ ಹಾಟ್ ಸ್ಟಾರ್ ನಲ್ಲಿ ಈ ಧಾರಾವಾಹಿ ಪ್ರಸಾರವಾಗಲಿದೆಯಂತೆ.
“ಕ್ಯುಂಕಿ ಸಾಸ್ ಭಿ ಕಭಿ ಬಹು ಥಿ” ಒಂದು ಪಾತ್ರವಾಗಿರಲಿಲ್ಲ, ಅದು ಭಾವನೆಗಳು, ನೆನಪು, ಆಚರಣೆ ಕುಟುಂಬ ಎಲ್ಲವನ್ನೂ ಒಟ್ಟಿಗೆ ತೆರೆಮೇಲೆ ಕಟ್ಟಿಕೊಡುವ ವೇದಿಕೆ ಆಗಿತ್ತು. ತುಳಸಿ ಪಾತ್ರವು ಸ್ವಂತ ಕುಟುಂಬದ ಒಬ್ಬಳನ್ನಾಗಿ ಪ್ರೇಕ್ಷಕರು ಸಂಭ್ರಮಿಸಿದ್ದರು, ಆ ಪಾತ್ರವನ್ನು ಸ್ವೀಕರಿಸಿದ್ದರು ಎಂದು ಇರಾನಿ ಹೇಳಿದ್ದು, ನಿಮ್ಮೆಲ್ಲರನ್ನು ಮತ್ತೆ ಭೇಟಿಯಾಗುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD