ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಕೊಂಚ ರಿಲೀಫ್: ಮರಣದಂಡನೆ ಮುಂದೂಡಿಕೆ - Mahanayaka

ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಕೊಂಚ ರಿಲೀಫ್: ಮರಣದಂಡನೆ ಮುಂದೂಡಿಕೆ

nimisha priya
15/07/2025

ನವದೆಹಲಿ: ಯೆಮೆನ್ ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಕೇರಳದ ನರ್ಸ್ ನಿಮಿಷ ಪ್ರಿಯಾಗೆ ಕೊಂಚ ರಿಲೀಫ್ ದೊರಕಿದ್ದು, ಸದ್ಯ ಮರಣ ದಂಡನೆ ಶಿಕ್ಷೆಯನ್ನು ಮುಂದೂಡಲಾಗಿದೆ.

ಆದರೆ ಯೆಮೆನ್ ನ ಕಾನೂನಿನ ಪ್ರಕಾರವಾಗಿ ಇನ್ನೂ ಕೂಡ  ಕ್ಷಮಾದಾನ ಅಥವಾ ಬ್ಲಡ್ ಮನಿ ಸ್ವೀಕಾರ ಮಾಡಲು ಸಂತ್ರಸ್ತನ ಕುಟುಂಬಸ್ಥರು ಒಪ್ಪಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ನಿಮಿಷ ಪ್ರಿಯ ಯೆಮನ್ ನ ತನ್ನ ವ್ಯವಹಾರದ ಪಾಲುದಾದ ತಲಾಲ್ ಅಬ್ದೋ ಮಹ್ದಿ ಎಂಬಾತನನ್ನು ಹತ್ಯೆ ಮಾಡಿದ್ದಳು. ಹೀಗಾಗಿ ಆಕೆಗೆ ಮರಣ ದಂಡನೆ ಶಿಕ್ಷೆ ಘೋಷಿಸಲಾಗಿತ್ತು. ನಿಮಿಷ ಪ್ರಿಯಾ ಅವರನ್ನ ರಕ್ಷಣೆ ಮಾಡಲು ಪ್ರಯತ್ನಗಳು ಮುಂದುವರಿದಿವೆ.

ಈ ಪ್ರಕರಣಕ್ಕೆ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್  ಮಾತುಕತೆಯ ಬಳಿಕ ಸೂಫಿ ವಿದ್ವಾಂಸ ಶೇಖ್ ಹಬೀಬ್ ಉಮರ್ ಮಧ್ಯಸ್ಥಿಕೆ ವಹಿಸಿದ್ದರು. ಅವರು ಪ್ರತಿನಿಧಿಗಳೂ ತಲಾಲ್ ನ ಸಹೋದರ ಸೇರಿದಂತೆ ಅವರ ಕುಟುಂಬಸ್ಥರ ಜೊತೆಗೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ. ಈ ಮಾತುಕತೆ ಫಲಪ್ರದವಾದರೆ ನಿಮಿಷ ಪ್ರಿಯಾ ಬಿಡುಗಡೆ ಸಾಧ್ಯವಿದೆ ಎಂದು ಹೇಳಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ